ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮಕ್ಕಳಲ್ಲಿ ಧಾರ್ಮಿಕ ಅರಿವು ಮೂಡಿಸಿ

Lingaraj Badiger
Updated On : 14 Apr 2014, 10:13 am

ತರೀಕೆರೆ: ಪೋಷಕರು ಮಕ್ಕಳಲ್ಲಿ ಬಾಲ್ಯದಿಂದಲೇ ಧಾರ್ಮಿಕ ಅರಿವು ಮೂಡಿಸಲು ಪ್ರಯತ್ನಿಸಬೇಕು ಎಂದು ತಿರುಪತಿ ತಿರುಮಲ ದೇವಸ್ಥಾನ ಮತ್ತು ದಾಸ ಸಾಹಿತ್ಯ ಪ್ರಾಜೆಕ್ಟ್‌ನ ವಿಶೇಷಾಧಿಕಾರಿ ಆನಂದತೀರ್ಥಾಚಾರ್ ಪಗಾಡಲ ತಿಳಿಸಿದ್ದಾರೆ.
ಸಂಗೀತ ಪಾಠಶಾಲೆ ವತಿಯಿಂದ ಪಟ್ಟಣದ ಸುಬ್ರಹ್ಮಣ್ಯ ದೇವಸ್ಥಾನದ ಅವರಣದಲ್ಲಿ ಮಕ್ಕಳಿಗಾಗಿ ಏರ್ಪಾಡಾಗಿದ್ದ ವಿಷ್ಣು ಸಹಸ್ರನಾಮ, ದೇವರನಾಮ ಕಲಿಕಾ ಶಿಬಿರದ ಸಮಾರೋಪ ಮತ್ತು ಗುರುಗಳಾದ ವ್ಯಾಸರಾಯರು ಮತ್ತು ವಾಧಿರಾಜಾರು ಸಂಸ್ಮರಣ ದಿನ ಸಮಾರಂಭದ ಉದ್ಘಾಟಿಸಿ ಮಾತನಾಡಿದರು.
ರಾಮಾಯಣ, ಮಹಾಭಾರತ ಭಾಗವತ ಪುರಾಣವವನ್ನು ಹಿರಿಯರು ಮಕ್ಕಳಿಗೆ ಹೇಳಿಕೊಡಬೇಕು.ಚಿಕ್ಕ ಮಕ್ಕಳನ್ನು ಧಾರ್ಮಿಕ ಪ್ರಜ್ಞೆಯಲ್ಲಿ ಪ್ರೇರೇಪಿಸಬೇಕು. ಮಕ್ಕಳಿಗೆ ನಿಜವಾದ ಧಾರ್ಮಿಕ ಸಂಸ್ಕೃತಿ ಹೇಳಿಕೊಡಬೇಕು ಎಂದು ತಿಳಿಸಿದ ಅವರು, ಶಿಬಿರದಲ್ಲಿ ವಿಷ್ಣು ಸಹಸ್ರನಾಮ, ದೇವರನಾಮಗಳನ್ನು ಮಕ್ಕಳಿಗೆ ಹೇಳಿಕೊಟ್ಟಿರುವುದು ತುಂಬಾ ಸಂತೋಷದ ವಿಚಾರ ಎಂದರು.
ಶ್ರೀವತ್ಸ ಭಜನಾ ಮಂಡಳಿಯ ಲತಾ ಗೋಪಾಲಕೃಷ್ಣ, ಶ್ರೀನಿವಾಸ ಸಂಗೀತ ಪಾಠಶಾಲೆಯ ವಿಜಯ ಪ್ರಕಾಶ್, ಭಜನಾ ಮಂಡಳಿಯ ಸದಸ್ಯೆರು ಆಕಾಶವಾಣಿ ಮುಖ್ಯ ಕಾರ್ಯನಿರ್ವಾಹಕ ಡಾ. ಎ.ಎಸ್. ಶಂಕರನಾರಾಯಣ್, ಬ್ರಾಹ್ಮಣ ಸೇವಾ ಸಮಿತಿ ಉಪಾಧ್ಯಕ್ಷ ಎಚ್.ಸಿ. ಗೋಪಾಲಕೃಷ್ಣ, ಬಿ.ಎಸ್. ಪ್ರಕಾಶ್, ಕನ್ನಡಶ್ರೀ ಬಿ.ಎಸ್. ಭಗವಾನ್, ಕಲಾವಿದ ಲಿಂಗಪ್ಪಯ್ಯ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement