ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಇನಾಂಭೂಮಿ: ತಡೆಯಾಜ್ಞೆ ನೀಡಿಲ್ಲ

Lingaraj Badiger
Updated On : 16 Apr 2014, 11:46 am

ಕ.ಪ್ರ.ವಾರ್ತೆ, ಮೂಡಿಗೆರೆ, ಏ.15
ತಾಲೂಕಿನ ಕಳಸ ಇನಾಂಭೂಮಿ ಸಮಸ್ಯೆಗೆ ಹೈಕೋರ್ಟ್‌ನಿಂದ ತಡೆಯಾಜ್ಞೆ ಬಂದಿದೆ. ನಿಮ್ಮೆಲ್ಲರ ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಸುಳ್ಳು ಹೇಳುತ್ತಿದ್ದಾರೆ. ಈ ರೀತಿಯ ಯಾವುದೇ ತಡೆಯಾಜ್ಞೆ ನೀಡಲಾಗಿಲ್ಲ. ಹೆಗ್ಡೆಯವರು ಸುಳ್ಳು ಹೇಳಿ ಮತ ಕೇಳುತ್ತಾ ವಂಚಿಸುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಕಣಚೂರ್ ಕೆ.ಎಸ್. ವಿನೋದ್ ಆರೋಪಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಎಲ್ಲಾ ರಂಗಗಳಲ್ಲಿಯೂ ಭ್ರಷ್ಟಾಚಾರದಿಂದ ಲೂಟಿ ಮಾಡಿರುವುದಲ್ಲದೇ ದೇಶದ ಜನತೆಯ ಆತ್ಮಸ್ಥೈರ್ಯ ಕಸಿದಿದೆ. ನಮ್ಮ ಸೈನಿಕರು, ರೈತರು ಕೇಂದ್ರ ಸರ್ಕಾರದ ನೀತಿಯಿಂದಾಗಿ ಸಾವಿಗೀಡಾಗುತ್ತಿದ್ದಾರೆ.
ವಾಜಪೇಯಿ ಅವರು ಪ್ರಧಾನಿ ಆಗಿದ್ದಾಗ ದೇಶದ ರಕ್ಷಣೆಗಾಗಿ ಜಾರಿ ಮಾಡಲಾಗಿದ್ದ ಪೋಟಾ ಕಾಯ್ದೆಯನ್ನು ಯುಪಿಎ ಸರ್ಕಾರ ಬಂದ ಕೂಡಲೇ ಹಿಂಪಡೆಯಿತು. ಈ ಕಾರಣಕ್ಕಾಗಿ ದೇಶವು ಭಯೋತ್ಪಾದಕತೆಯಿಂದ ಭಯಪಡುವಂತಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
10 ವರ್ಷಗಳಿಂದಲೂ ಅಭಿವೃದ್ಧಿ ಸಾಧಿಸದೇ ದೇಶವನ್ನು ಲೂಟಿ ಮಾಡಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನು ಪ್ರಜ್ಞಾವಂತ ಮತದಾರರು ತಿರಸ್ಕರಿಸಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಮತದಾರರು ಬೆಂಬಲ ನೀಡವುದರೊಂದಿಗೆ ದೇಶದಲ್ಲಿ ಮೋದಿ ಅವರ ನೇತೃತ್ವದ ಸಮರ್ಥ, ಸದೃಢ, ಸಶಕ್ತ ಸರ್ಕಾರವನ್ನು ದೇಶಕ್ಕೆ ಚುನಾಯಿಸುವಂತೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement