ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಚುನಾವಣೆ ಬಳಿಕ ಭದ್ರಾ ನೀರು ಪೂರೈಕೆ: ದತ್ತ

Lingaraj Badiger
Updated On : 16 Apr 2014, 11:45 am

ಕಡೂರು:   ನೆನೆಗುದಿಗೆ ಬಿದ್ದಿದ್ದ ಭದ್ರಾ ಡ್ಯಾಂನಿಂದ ಕಡೂರು, ಬೀರೂರು ಪಟ್ಟಣಗಳಿಗೆ ನೀರೊದಗಿಸುವ ಕಾಮಗಾರಿಯು ತಮ್ಮ ಪ್ರಯತ್ನದಿಂದ ಮುಗಿದಿದ್ದು ಚುನಾವಣೆ ನಂತರ ಪ್ರಾಯೋಗಿಕ ನೀರು ಹರಿಯಲಿದೆ ಎಂದು ಶಾಸಕ ವೈ.ಎಸ್.ವಿ. ದತ್ತ ಹೇಳಿದರು.  
 ಅವರು ಕಡೂರು ಹಾಗು ಬೀರೂರು ಪಟ್ಟಣಗಳಲ್ಲಿ ದೇವೇಗೌಡರ ಪರ ನಡೆಸಿದ ಬೈಕ್ ರ್ಯಾಲಿಯಲ್ಲಿ ಮಾತನಾಡಿ, ಸಾಮಾನ್ಯರಲ್ಲಿ ಸಾಮಾನ್ಯರಾಗಿ, ಜನಸಾಮಾನ್ಯರಲ್ಲಿ ಬೆರೆಯುವ ತಾವು ಶಾಸಕರಾಗಿರುವುದನ್ನು ಅರಗಿಸಿಕೊಳ್ಳಲು ಆಗದ ದೊಡ್ಡವರು ತಾವು ಕ್ಷೇತ್ರಕ್ಕೆ ಏನೂ ಮಾಡಿಲ್ಲ ಎಂದು ಆರೋಪಿಸುತ್ತಿದ್ದಾರೆ. ಕೇವಲ 10 ತಿಂಗಳಲ್ಲಿ ತಾವು ಕೋಟ್ಯಂತ ರು.ಗಳ ಕಾಮಗಾರಿ ತಂದಿದ್ದು ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾಮಗಾರಿಗಳು ಚುನಾವಣೆ ನಂತರ ಮುಂದುರಿಯಲಿವೆ ಎಂದರು.
ಭದ್ರಾ ಯೋಜನೆ: ಕಾಂಗ್ರೆಸ್ ನಾಯಕರು ಕ್ಷೇತ್ರ ಸುತ್ತಿ ಸಮಸ್ಯೆ ಅರಿಯದೆ ಕೇವಲ ಪತ್ರಿಕಾ ಹೇಳಿಕೆ ನೀಡುವುದರಿಂದ ಜನರ ಸಮಸ್ಯೆ ಬಗೆಹರಿಸಲು ಸಾದ್ಯವಿಲ್ಲ. 2 ವರ್ಷದಿಂದ ಭದ್ರಾ ಡ್ಯಾಂನಿಂದ ಕುಡಿಯವ ನೀರಿನ ಯೋಜನೆಯು ಏಕೆ ನೆನೆಗುದಿಗೆ ಬಿದ್ದಿತ್ತು. ಇದರ ಜಾರಿಗೆ ಕಾಂಗ್ರೆಸಿಗರು ಏಕೆ ಪ್ರಯತ್ನಿಸಲಿಲ್ಲ. ಯೋಜನೆ ಜಾರಿಗೆ ವಿರೋಧಿಸಿದ್ದ ಲಕ್ಕವಳ್ಳಿ ಹಾಗು ತರೀಕೆರೆ ಜನರನ್ನು ತಾವು ಮನವೊಲಿಸಿ ಕಾಮಗಾರಿ ರ್ಪೂಣಗೊಳಿಸಲಾಗಿದೆ ಎಂದು ಅವರು ತಿಳಿಸಿದರು.   ದೇವೇಗೌಡರು ಸಂಸದರಾಗಿ ಕಡೂರು ವಿಧಾನಸಭಾ ಕ್ಷೇತ್ರದ ರಸ್ತೆಗಳು, ಸಮುದಾಯಭವನಗಳು, ದೇವಾಲಯಗಳು ಹಾಗು ರಸ್ತೆಗಳ ಅಭಿವೃದ್ದಿ ಕಾರ್ಯ ಮಾಡಿದ್ದು, ಅವರ ಗೆಲುವು ಶತಸಿದ್ದ. ಈಗಾಗಲೇ ದೇಶದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಾಮಾನದಲ್ಲಿ ತೃತೀಯ ರಂಗವುದ ಮೂಲಕ ದೇಶದ ಭವಿಷ್ಯ ರೂಪಿಸುವಲ್ಲಿ ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸಲಿದೆ. ಆ ಮೂಲಕ ಮಾಜಿ ದೇವೇಗೌಡರು ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ಈ ನಿಟ್ಟಲ್ಲಿ ದೇವೇಗೌಡರ ಗೆಲುವು ಯಾರೇ ಪ್ರತಿಸ್ಪರ್ಧಿಯಾಗಿದ್ದರೂ ಅವರ ಗೆಲುವು ತಪ್ಪಿಸಲು ಸಾದ್ಯವಿಲ್ಲ ಎಂದರು.
ಜೆಡಿಎಸ್ ನಗರ ಘಟಕದ ಅಧ್ಯಕ್ಷ ಭಂಡಾರಿ ಶ್ರೀನಿವಾಸ್,ನಗರಾಧ್ಯಕ್ಷ ಕೆ.ವಿ.ವಾಸು, ಮುಖಂಡರಾದ ಎನ್. ಇಮಾಮ್, ಸೀಗೇಹಡ್ಲು ಹರೀಶ್,ರಮೇಶ್, ಬಿ.ಟಿ.ಗಂಗಾಧರನಾಯ್ಕ, ಜಯಮ್ಮ, ಜಿಗಣೇಹಳ್ಳಿ ನೀಲಕಂಠಪ್ಪ, ತನ್ವೀರ್ ಅಹಮದ್, ರಾಂಪುರ ಮಹೇಶ್, ಕದಂಬ ವೆಂಕಟೇಶ್, ನಾಗರಾಜ್ ಸೇರಿದಂತೆ ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement