ಜಿಲ್ಲೆಯಲ್ಲಿ 8,62,348 ಮತದಾರರು
ಚಿಕ್ಕಮಗಳೂರು: ಉಡುಪಿ- ಚಿಕ್ಕಮಗಳೂರು ಹಾಗೂ ಹಾಸನ ಲೋಕಸಭಾ ಕ್ಷೇತ್ರಗಳಿಗೆ ಒಳಪಟ್ಟಿರುವ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ ಮತ ಚಲಾವಣೆ ಮಾಡುವವರ ಸಂಖ್ಯೆ 8,62,348.
ಜಿಲ್ಲೆಯಲ್ಲಿ ಏ.17ರಂದು ಮತದಾನ ನಡೆಯಲಿದ್ದು, ಮತದಾನಕ್ಕಾಗಿ 1168 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಈ ಪೈಕಿ ಅತಿಸೂಕ್ಷ್ಮ 150, ಸೂಕ್ಷ್ಮ 256, ಕ್ಲಿಷ್ಟಕರ 58 ಹಾಗೂ ಅತಿ ಕ್ಲಿಷ್ಟಕರ 10 ಮತಗಟ್ಟೆಗಳಿದ್ದು, ಇವುಗಳಲ್ಲಿ 41 ಮತಗಟ್ಟೆಗಳು ನಕ್ಸಲ್ ಪೀಡಿತ ಪ್ರದೇಶದ ವ್ಯಾಪ್ತಿಯಲ್ಲಿವೆ ಎಂದು ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಆರ್. ಚೇತನ್ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
ಶಾಂತಿಯುತ ಮತದಾನಕ್ಕಾಗಿ ಜಿಲ್ಲೆಯಲ್ಲಿ ಕೇಂದ್ರದ ಅರೇ ಸೇನಾ ಪಡೆ, ಕೆ.ಎಸ್.ಆರ್.ಪಿ., ಗೃಹ ರಕ್ಷಕದಳ, ಸ್ಥಳೀಯ ಸಿಬ್ಬಂದಿ ಸೇರಿದಂತೆ ಒಟ್ಟು 1500 ಮಂದಿ ಸಿಬ್ಬಂದಿಗಳನ್ನು ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಆರ್. ಚೇತನ್ ಹೇಳಿದರು.
ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಗ್ರಾಮಾಂತರ ಪ್ರದೇಶದಲ್ಲಿ 5 ಹಾಗೂ ನಗರ ಪ್ರದೇಶಗಳಲ್ಲಿ ಮಾದರಿ ಮತಗಟ್ಟೆಗಳನ್ನು ತೆರೆಯಲಾಗಿದೆ. 1168 ಮತಗಟ್ಟೆಗಳಿಗೆ 5653 ಚುನಾವಣಾ ಸಿಬ್ಬಂದಿ ನೇಮಕ ಮಾಡಲಾಗಿದ್ದು, ಈ ಪೈಕಿ ಅಧ್ಯಕ್ಷಾಧಿಕಾರಿಯಾಗಿ 1396, ಅಷ್ಟೇ ಸಂಖ್ಯೆಯ ಸಹಾಯಕ ಅಧ್ಯಕ್ಷಾಧಿಕಾರಿಗಳು ಮತ್ತು 2861 ಮತಗಟ್ಟೆ ಅಧಿಕಾರಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶೇಖರಪ್ಪ ತಿಳಿಸಿದರು.
ಅಕ್ರಮವಾಗಿ ಮದ್ಯ ದಾಸ್ತಾನು ಮಾಡಿದ್ದಾರೆಂಬ ದೂರಿನನ್ವಯ ಮೂಡಿಗೆರೆ ಪಟ್ಟಣದ ಸುದರ್ಶನ್ ವೈನ್ ಶಾಪ್ನ ಪರವಾನಗಿಯನ್ನು ಏ.14ರಿಂದ 30ರ ವರೆಗೆ ಅಮಾನತುಗೊಳಿಸಲಾಗಿದೆ. ಅಕ್ರಮ ಮದ್ಯ ಸಾಗಾಣಿಕೆ ಹಾಗೂ ದಾಸ್ತಾನು ಮಾಡಿರುವ ಸಂಬಂಧ 457 ಕಡೆಗಳಲ್ಲಿ ಅಬಕಾರಿ ಇಲಾಖೆಯ ತಂಡ ದಾಳಿ ನಡೆಸಿದ್ದು, 124 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಸಂಬಂಧ 84 ಜನರನ್ನು ಬಂಧಿಸಲಾಗಿದೆ. ವಿವಿಧೆಡೆ ಅಕ್ರಮವಾಗಿ ದಾಸ್ತಾನು ಮಾಡಿದ್ದ ಮದ್ಯ ಹಾಗೂ ವಾಹನ ಸೇರಿದಂತೆ ಸುಮಾರು 6.66 ಲಕ್ಷ ಮೌಲ್ಯದ ಸಾಮಾಗ್ರಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಮತ ಜಾಗೃತಿಗೆ ಪಂಜಿನ ಮೆರವಣಿಗೆ
ಮೂಡಿಗೆರೆ: ಮತದಾನ ಪ್ರತಿಯೊಬ್ಬರ ಜನ್ಮ ಸಿದ್ದು ಹಕ್ಕು, ಮತಗಟ್ಟೆಗೆ ಸಾಗಿ ಮತ ಮಾಡುವುದರ ಮೂಲಕ ತಮ್ಮ ಹಕ್ಕನ್ನು ಉಳಿಸಿಕೊಳ್ಳುವಂತೆ ಸಹಾಯಕ ಚುನಾವಣಾಧಿಕಾರಿ ಕೆ.ಚನ್ನಬಸಪ್ಪ ತಿಳಿಸಿದರು
ಮಿನಿವಿಧಾನಸೌಧದಲ್ಲಿ ಮತಧಾನ ಜಾಗೃತಿಗಾಗಿ ಹಮ್ಮಿಕೊಳ್ಳಲಾಗಿದ್ದ ಪಂಜಿನ ಮೆರವಣಿಗೆಗೆ ಚಾಲನೇ ನೀಡಿ ಮಾತನಾಡಿದ ಅವರು. ಈ ಬಾರಿ ಶಾಂತಿಯುತ ಚುನಾವಣೇ ನಡೆಸುವ ಸಲುವಾಗಿ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು. ಈ ಭಾರಿ ಮತದಾರರ ಹೆಬ್ಬೆರೆಳಿಗೆ ಶಾಯಿಯನ್ನು ಹಾಕಲಾಗುವುದು ಎಂದು ತಿಳಿಸಿದರು.
ಈ ಬಾರಿ 224 ಭೂತ್ಗಳಿಗೆ 130 ವಾಹನಗಳನ್ನು ನಿಯೋಜಿಸಲಾಗಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 32 ಬಸ್ಸುಗಳು, 89 ಜೀಪ್ಗಳು ಹಾಗೂ 9 ಮಿನಿಬಸ್ಸುಳು ಕಾರ್ಯ ನಿರ್ವಹಿಸುತ್ತವೆ ಎಂದರು. ನಕ್ಸಲ್ ಪ್ರದೇಶಗಲಾದ ಕಳಸ ಭಾಗದ ಕುಂದಡಿ ಮೇಗಲ್, ಕಲಕೋಡು, ಹೆಮ್ಮಕ್ಕಿ, ಬಲಿಗೆ, ಮಣ್ಣಿನ್ಪಾಲ್, ತಲಗೋಡುಗಳಲ್ಲಿ ಮುನ್ನೇಚ್ಚರಿಕೆ ಕ್ರಮವಾಗಿ ಸಿಆರ್ಪಿಎಸ್, ಕೆಎಸ್ಆರ್ಪಿ ನಿಯೋಜಿಸಲಾಗಿದೆ ಎಂದರು.
ತಹಶಿಲ್ದಾರ್ ಶಾರದಾಂಭ ಮಾತನಾಡಿ. ಮಲೆನಾಡಿನಲ್ಲಿ ಮಳೆ ಬಿಡದೆ ಸುರಿಯುತ್ತಿದ್ದು. ಮರ ಬಿದ್ದು ರಸ್ತೆ ಬ್ಲಾಕ್ ಆದಲ್ಲಿ ತಕ್ಷಣ ತೆರವುಗೊಳಿಸಲು ಸಿದ್ದರಿರುವಂತೆ ಅರಣ್ಯಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಜಪ್ಪ, ಶಿಕ್ಷಣಾಧಿಖಾರಿ ಕೋಮರಯ್ಯ, ರಾಜಸ್ವ ನಿರೀಕ್ಷಕ ಎಂ.ಗಂಗಾಧರ್ ಸೇರಿದಂತೆ ವಿವಿಧ ಇಲಾಖೇಯ ಅಧಿಕಾರಿಗಳು ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.