ಇಂದು ಮತದಾನ: ಎಲ್ಲೆಡೆ ಭದ್ರತೆ
ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ ಏ.16
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಇಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ.
ಈ ಕ್ಷೇತ್ರದಲ್ಲಿ ಒಟ್ಟು 13,86,515 ಮತದಾರರು ಇದ್ದು, 6,78,710 ಪುರುಷ ಹಾಗೂ 7,07,742 ಮಹಿಳಾ ಮತದಾರರು ಉಭಯ ಜಿಲ್ಲೆಗಳಲ್ಲಿ ಇದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಚಿಕ್ಕಮಗಳೂರು, ಮೂಡಿಗೆರೆ ಹಾಗೂ ಶೃಂಗೇರಿ ವಿಧಾನಸಭಾ ಕ್ಷೇತ್ರಗಳಲ್ಲಿ 6,74,982 ಮತದಾರರು ಇದ್ದು, ಈ ಪೈಕಿ 3,40,149 ಪುರುಷರು, 3,34,797 ಮಹಿಳಾ ಮತದಾರರು ಇದ್ದಾರೆ. ಉಡುಪಿ ಜಿಲ್ಲೆಯ ಒಟ್ಟು 7,11,533 ಮತದಾರರಲ್ಲಿ 3,38,561 ಪುರುಷರು, 3,72,945 ಮಹಿಳಾ ಮತದಾರರು ಇದ್ದಾರೆ. ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 63 ಜನ ಇತರೆ ಮತದಾರರು ಇದ್ದಾರೆ. ಚುನಾವಣಾ ಕಣದಲ್ಲಿ 11 ಅಭ್ಯರ್ಥಿಗಳು ಇದ್ದಾರೆ.
1751 ಮತಗಟ್ಟೆ: ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ 1751 ಮತಗಟ್ಟೆಗಳಿದ್ದು, ಈ ಪೈಕಿ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ 932 ಹಾಗೂ ಉಡುಪಿ ಜಿಲ್ಲೆಯಲ್ಲಿ 819 ಮತಗಟ್ಟೆಗಳಿವೆ.
ಕಡೂರು ಕ್ಷೇತ್ರ: ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿರುವ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,87,366 ಮತದಾರರು ಇದ್ದು, ಈ ಪೈಕಿ 95,586 ಪುರುಷರು, 91,773 ಮಹಿಳಾ ಮತದಾರರು ಇದ್ದಾರೆ. ಈ ಕ್ಷೇತ್ರದಲ್ಲಿ 236 ಮತಗಟ್ಟೆಗಳಿವೆ. ಹಾಸನ ಲೋಕಸಭಾ ಕ್ಷೇತ್ರದ ಕಣದಲ್ಲಿ 14 ಅಭ್ಯರ್ಥಿಗಳು ಇದ್ದಾರೆ.
ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 8,62,348 ಮತದಾರರು ಇದ್ದು, ಮತ ಚಲಾವಣೆಗಾಗಿ 1168 ಮತಗಟ್ಟೆ ತೆರೆಯಲಾಗಿದ್ದು, ಇಲ್ಲಿ ಕರ್ತವ್ಯ ನಿರ್ವಹಿಸಲು 5653 ಸಿಬ್ಬಂದಿ ನಿಯೋಜಿಸಲಾಗಿದ್ದು, ಈ ಪೈಕಿ 1396 ಪಿಆರ್ಒ, 1396 ಎಪಿಆರ್ಒ ಹಾಗೂ 2861 ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ.
ಚುನಾವಣಾ ಸಾಮಗ್ರಿಗಳ ಸರಬರಾಜು ಹಾಗೂ ವಿವಿಧ ಕಾರ್ಯನಿರ್ವಹಕ ತಂಡಗಳಿಗೆ 324 ಮಾರ್ಗ ರಚಿಸಿದ್ದು, ಸದರಿ ಮಾರ್ಗಗಳಿಗೆ 178 ಸರ್ಕಾರಿ ಹಾಗೂ ಖಾಸಗಿ ಬಸ್ಗಳು, 11 ಮಿನಿ ಬಸ್ಗಳು, ಜೀಪು ಮಾದರಿಯ ಇತರೆ ವಾಹನಗಳು ಸೇರಿದಂತೆ 282 ವಾಹನಗಳು ಒಳಗೊಂಡಂತೆ 471 ವಾಹನಗಳನ್ನು ನಿಯೋಜಿಸಲಾಗಿದೆ.
ಮತಗಟ್ಟೆಗಳಿಗೆ ಸಿಬ್ಬಂದಿ: ಜಿಲ್ಲೆಯ 1168 ಮತಗಟ್ಟೆಗಳಿಗೆ ತಾಲೂಕು ಕೇಂದ್ರಗಳಿಂದ ಮತಯಂತ್ರಗಳೊಂದಿಗೆ ಮತಗಟ್ಟೆ ಅಧಿಕಾರಿಗಳು ಬುಧವಾರ ತೆರಳಿದರು.
ಪೊಲೀಸರ ಬಿಗಿ ಕಾವಲಿನಲ್ಲಿ ಮತಗಟ್ಟೆ ಅಧಿಕಾರಿಗಳು ತೆರಳಿದ್ದು, ಜಿಲ್ಲೆಯಲ್ಲಿ ಶಾಂತಿಯುತವಾಗಿ ಮತದಾನ ನಡೆಸಲು ಉದ್ದೇಶದಿಂದಾಗಿ 1500 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ನಕ್ಸಲ್ಪೀಡಿತ ಪ್ರದೇಶದಲ್ಲಿ 41 ಮತಗಟ್ಟೆಗಳಿದ್ದು, ಈ ಪ್ರದೇಶದಲ್ಲಿ ಕೇಂದ್ರ ಅರೇಸೇನಾ ಪಡೆಯ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಸ್ಪರ್ಧೆಯಲ್ಲಿರುವ
ಅಭ್ಯರ್ಥಿಗಳು
ಜಯಪ್ರಕಾಶ್ ಹೆಗ್ಡೆ...... ಕಾಂಗ್ರೆಸ್
ಜಾಕೀರ್ ಹುಸೇನ್.......... ಬಿಎಸ್ಪಿ
ಧನಂಜಯಕುಮಾರ್.. ಜೆಡಿಎಸ್
ವಿಜಯಕುಮಾರ್............ ಸಿಪಿಐ
ಶೋಭಾ ಕರಂದ್ಲಾಜೆ......... ಬಿಜೆಪಿ
ಗುರುದೇವ....................... ಆಪ್
ಜಗನ್ನಾಥ............ ಸಿಪಿಐ(ಎಂಎಲ್)
ಮೈನುದ್ದೀನ್............... ಪಕ್ಷೇತರ
ಜಿ. ಮಂಜುನಾಥ.......... ಪಕ್ಷೇತರ
ಶ್ರೀನಿವಾಸ.................... ಪಕ್ಷೇತರ
ಸುಧೀರ್..................... ಪಕ್ಷೇತರ