ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ತರೀಕೆರೆಯಲ್ಲೂ ಸರ್ವ ತಯಾರಿ

Rashmi Kasaragodu
Updated On : 17 Apr 2014, 10:36 am

ತರೀಕೆರೆ: ಇಂದು ಮತದಾನಕ್ಕೆ ತರೀಕೆರೆ ಕ್ಷೇತ್ರದಲ್ಲಿ ತಾಲೂಕು ಅಡಳಿತ ಸಕಲ ಸಿದ್ಧತೆ ನಡೆಸಿದೆ. ಎಸ್ಜೆಎಂ ಕಾಲೇಜಿನಲ್ಲಿ ಉಪವಿಭಾಗಾಧಿಕಾರಿ ಅನುರಾಧ ಮತ್ತು ತಹಸೀಲ್ದಾರ್ ಶಿವಕುಮಾರ್ ಅವರು ಮತಗಟ್ಟೆ ಅಧಿಕಾರಿಗಳಿಗೆ,  ಚುನಾವಣೆ ಸಿಬ್ಬಂದಿಗೆ ಮತ ಯಂತ್ರ ಮತ್ತಿತರ ಚುನಾವಣಾ ಸಾಮಗ್ರಿಗಳನ್ನು ವಿತರಿಸಿದರು. ಚುನಾವಣೆಗಾಗಿ ತರೀಕರೆ ಲೋಕಸಭಾ ಕ್ಷೇತ್ರದಲ್ಲಿ 221 ಮತಗಟ್ಟೆ ಸ್ಥಾಪಿಸಲಾಗಿದ್ದು, ವಿವಿಧ ಮತಕೇಂದ್ರಗಳಿಗೆ 32 ಸರ್ಕಾರಿ ಬಸ್ಸುಗಳಲ್ಲಿ ಮತಗಟ್ಟೆ ಅಧಿಕಾರಿ, ಇತರ ಸಿಬ್ಬಂದಿ ಕಳಿಸಿಕೊಡಲಾಗಿದೆ.
ಮತ ಕೇಂದ್ರಕ್ಕೆ ಭದ್ರತೆ
ಶೃಂಗೇರಿ: ಗುರುವಾರ ಲೋಕಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆ ತಾಲೂಕಿನ ಎಲ್ಲಾ ಮತಗಟ್ಟೆಗಳಿಗೆ ಭಾರಿ ಬಿಗಿ ಭದ್ರತೆ ಒದಗಿಸಲಾಗಿದೆ. ಒಟ್ಟು 49 ಮತಗಟ್ಟೆಗಳಲ್ಲಿ 21 ಅತಿ ಸೂಕ್ಷ್ಮ, 7 ಸೂಕ್ಷ್ಮ ಹಾಗೂ 21 ಸಾಮಾನ್ಯ ಮತಗಟ್ಟೆಗಳಿದ್ದು, ನಕ್ಸಲ್ ಪ್ರಭಾವಿತ ಪ್ರದೇಶಗಳಲ್ಲಿನ ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಭಾರಿ ಬಂದೋಬಸ್ತ್  ಒದಗಿಸಲಾಗಿದೆ. ಕೆಎಸ್ಆರ್ಪಿ, ಎಎನ್ಎಫ್, ಡಿಎಆರ್ ಪಡೆಗಳ ಸರ್ಪಗಾವಲು ಹಾಕಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ಮತದಾನ ನಡೆಯುವ ಸಲುವಾಗಿ ಬುಧವಾರ ಸಂಜೆಯಿಂದಲೇ ಮುಂಜ್ರಾಗತೆ ಕ್ರಮವಾಗಿ ತೀವ್ರ ನಿಗಾ ಕಟ್ಟೆಚ್ಚರ ವಹಿಸಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement