ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬಂಗಾರಪ್ಪ ಸಾಲಗಾರರಾಗಲು ಕಾರಣ ಮಧು: ಕುಮಾರ

Rashmi Kasaragodu
Updated On : 17 Apr 2014, 10:37 am

ಶಿವಮೊಗ್ಗ: ಕ್ಷೇತ್ರದ ಕೊನೆ ಹಂತದ ಪ್ರಚಾರದಲ್ಲಿ ಕಾಂಗ್ರೆಸ್ ಮುಖಂಡ ಕುಮಾರ್ ಬಂಗಾರಪ್ಪನವರು ಒಂದು ಸುತ್ತಿನ ಕರಪತ್ರ ಸಮರ ಸಾರಿದ್ದಾರೆ. ತಮ್ಮ ಸಹೋದರಿ ವಿರುದ್ಧ ಹರಿತ ಶಬ್ದಗಳಲ್ಲಿ ಟೀಕಿಸಿ ಮನೆ ಮನೆಗೆ ಕರಪತ್ರ ಮುಟ್ಟಿಸಲು ಸಫಲರಾಗಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಕೋರುವುದನ್ನು ಮರೆತಿಲ್ಲ. ಡಾ. ರಾಜ್ ಅವರ ನಿಲುವಿಗೆ ವಿರುದ್ಧವಾಗಿ ಅವರ ಕುಟುಂಬದವರನ್ನು ರಾಜಕೀಯಕ್ಕೆ ಕರೆತಂದು ಅಭಿಮಾನಿ ದೇವರು ವ್ಯಸನಗೊಳ್ಳುವಂತೆ ಮಾಡಲಾಗಿದೆ ಎಂದು ಕುಮಾರ್ ಬಂಗಾರಪ್ಪ ಕರಪತ್ರದಲ್ಲಿ  ಹೇಳಿದ್ದಾರೆ. ತಮ್ಮ ಅಸ್ತಿತ್ವದ ಕೊರತೆಯನ್ನು ನಿವಾರಿಸಿಕೊಳ್ಳಲು ಕಂಡಕಂಡ ನಟ ನಟಿಯರನ್ನು ಬೀದಿಗಿಳಿಸಿ ಜಾತ್ರೆ ನಡೆಸುತ್ತಿದ್ದಾರೆ. ಆದರೂ ರಾಜ್ ಕುಟುಂಬದ ಇತರೆ ಸದಸ್ಯರು ಇವರ ಜೊತೆಗೂಡದೇ ಇರುವುದು ಆ ಮಹಾಚೇತನದ ಆತ್ಮಕ್ಕೆ ಸಲ್ಲಿಸಿದ ಗೌರವ ಎನ್ನಬೇಕೆಂದು ಪ್ರತಿಪಾದಿಸಿದ್ದಾರೆ. ಬಂಗಾರಪ್ಪನವರನ್ನು ಸಾಲಗಾರನನ್ನಾಗಿಸಿ ಸೋಲಿನ ಸರಮಾಲೆಯನ್ನು ಅವರ ಕೊರಳಿಗೆ ಕಟ್ಟಿದ ಮತ್ತು ಸೊರಗಿಸಿ ಸಾವಿನ ಸನಿಹಕ್ಕೆ ತಂದಿದ್ದು ಮಧು ಎಂದು ಟೀಕಿಸಿದ್ದಾರೆ.



ಹೆಗ್ಡೆ ಪರ ಮತಯಾಚನೆ...
ತರೀಕೆರೆ: ಸಮೀಪದ ಅಜ್ಜಂಪುರ ಹೋಬಳಿಯಲ್ಲಿ ತಾಲೂಕು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ವತಿಯಿಂದ ಉ- ಚಿ ಲೋಕಸಭಾ ಕ್ಷೇತ್ರ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಪರ ಮತಯಾಚಿಸಲಾಯಿತು. ಘಟಕದ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಸಮೀ ಉಲ್ಲಾ ಷರೀಫ್, ಕಾರ್ಯದರ್ಶಿ ವಜೀರ್ ಪಾಷ, ಇದಿನಬ್ಬ, ರಫೀಕ್ ಅಹಮದ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement