ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಂಭ್ರಮದ ಬ್ರಹ್ಮ ರಥೋತ್ಸವ

Mainashree
Updated On : 20 Apr 2014, 11:45 am

ಕ.ಪ್ರ.ವಾರ್ತೆ ್ಣ ಕಡೂರು ್ಣ ಏ. 19
ತಾಲೂಕಿನ ಮಲ್ಲೇಶ್ವರದ ಇತಿಹಾಸ ಪ್ರಸಿದ್ಧ ಸ್ವರ್ಣಾಂಬ ದೇವಿಯ ದಿವ್ಯ ಬ್ರಹ್ಮ ರಥೋತ್ಸವವು ವಿಜೃಂಭಣೆಯಿಂದ ಇತ್ತೀಚೆಗೆ ನೆರವೇರಿತು.
ಶ್ರೀದೇವಿಯರ ಸನ್ನಿಧಿಯಲ್ಲಿ ಬೆಳಗ್ಗೆ 6 ಗಂಟೆಗೆ ಶ್ರೀರಾಮ ಮಂದಿರದಲ್ಲಿ ಶ್ರೀರಾಮದೇವರಿಗ ಪೂಜೆ ಸಲ್ಲಿಸಿ ಸಂಪ್ರದಾಯದಂತೆ ವಿಶೇಷ ಅಭಿಷೇಕ ಮಾಡಲಾಯಿತು. ನಂತರ ಸ್ವರ್ಣಾಂಬ ಅಮ್ಮನವರಿಗೆ ನಿತ್ಯ ಅಭಿಷೇಕ, ನಿತ್ಯಪೂಜೆ, ಅರ್ಚನೆ ಮತ್ತು ಗಜಾರೋಹಣೋತ್ಸವ, ಶ್ರೀಕನ್ಯಕಾ ಪೂಜೆ, ಕಲ್ಯಾಣೋತ್ಸವ ನಡೆಯಿತು.
12 ಗಂಟೆಯ ನಂತರ ಅಮ್ಮನವರ ಉತ್ಸವ ಹೊರಟಿತು.ದೇವಾಲಯದ ಸುತ್ತ ಸೇರಿದ್ದ ಭಕ್ತರು ಅಮ್ಮನವರಿಗೆ ಬಹು ಇಷ್ಟವಾದ ಕುಂಕುಮ ಸೇವೆ ಅರ್ಪಿಸುವ ಮೂಲಕ ದೇವಿಯ ಕೃಪೆಗೆ ಪಾತ್ರರಾದರು.
ಆನಂತರ ಸ್ವರ್ಣಾಂಬ ದೇವಿಯನ್ನು ರಥದಲ್ಲಿ ಕುಳ್ಳಿರಿಸಿ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸುಡು ಬಿಸಿಲನ್ನು ಲೆಕ್ಕಿಸದೆ ಬೆಂಗಳೂರು, ಹಾಸನ, ಶಿವಮೊಗ್ಗ, ರಾಮನಗರ, ಬಳ್ಳಾರಿ ಸೇರಿದಂತೆ ಹೊರ ರಾಜ್ಯಗಳಿಂದಲೂ ಆಗಮಿಸಿದ್ದ ಭಕ್ತ ಸಮೂಹವು ಅಮ್ಮನವರ ರಥೋತ್ಸವದಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದು ಪುನೀತರಾದರು. ಜಾತ್ರೆಗೆ ಆಗಮಿಸಿದ ಭಕ್ತರಿಗೆ ಅಮ್ಮನವರ ದೇವಾಲಯದಲ್ಲಿ ಈ ಬಾರಿಯೂ ಪ್ರಸಾದ ಏರ್ಪಡಿಸಲಾಗಿತ್ತು. ಜಾತ್ರೆಯಲ್ಲಿ ಹಳ್ಳಿಮಾರದಮ್ಮ, ಚೌಡ್ಲಾಪುರದ ಕರಿಯಮ್ಮ ಸೇರಿದಂತೆ ವಿವಿಧ ಗ್ರಾಮ ದೇವರು ಭಾಗವಹಿಸಿ ಜಾತ್ರೆಗೆ ಮೆರುಗು ತಂದವು. ಸಂಜೆ ಪ್ರದೋಷ ಪೂಜೆ ನೆರವೇರಿತು. ಸ್ವರ್ಣಾಂಬ ಸನ್ನಿಧಿಯ ವ್ಯವಸ್ಥಾಪಕರಾದ ಎಂ.ಟಿ. ಶ್ರೀನಿವಾಸ್ ಮತ್ತು ಸಮಿತಿಯ ಪದಾಧಿಕಾರಿಗಳು ಶ್ರಮ ವಹಿಸುವ ಮೂಲಕ ಸ್ವರ್ಣಾಂಬ ದೇವಿಯವರ ಜಾತ್ರಾ ಮಹೋತ್ಸವವು ಶಾಂತಿಯುತವಾಗಿ ಮತ್ತು ಅದ್ಧೂರಿಯಾಗಿ ನೆರವೇರಿತು. ಅಮ್ಮನ ಪುರ ಪ್ರವೇಶದ ನಂತರ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement