ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬೆತ್ತಲಾಗುತ್ತಿರುವ ಬರಿಗೆ ಕಾನು

Rashmi Kasaragodu
Updated On : 22 Apr 2014, 10:57 am

ಸೊರಬ: ಪಶ್ಚಿಮ ಘಟ್ಟದ ಸೆರಗಿನಲ್ಲಿರುವ, ತಾಲೂಕಿನ ಅತಿಹೆಚ್ಚು ಸರಾಸರಿ 1930.80 ಮಿ.ಮೀ. ಮಳೆ ಬೀಳುವ ದಟ್ಟ ಕಾನನ ಪ್ರದೇಶ ಉಳವಿ ಹೋಬಳಿ ಬರಿಗೆ ಕಾನ್ ಅಕ್ರಮ ಚಟುವಟಿಕೆ ಕುಕೃತ್ಯಕ್ಕೆ ಸಿಲುಕಿ ನರಳುತ್ತಿದೆ.
ಅಂತರ್ಜಲ ಹೆಚ್ಚಳಕ್ಕೆ ಅಗತ್ಯವಿರುವ, ಪರಿಸರ ಸಮತೋಲನಕ್ಕೆ ಪ್ರಧಾನವಾಗಿ ನೆರವಾಗುವ ನೂರಾರು ವರ್ಷ ಹಳೆಯ, ಬೆಲೆಬಾಳುವ ಮರಗಳ ಮಾರಣ ಹೋಮ ಇಲ್ಲಿ ನಡೆಯುತ್ತಿದೆ.
ಈಚೆಗೆ ಇಲ್ಲಿ ಯಥೇಚ್ಚ ನಾಟದ ಮರಗಳು ಕಟ್ಟಿಗೆಗಾಗಿ ಕಡಿತಲೆಗೊಂಡಿವೆ. ಲೋಡ್‌ಗಟ್ಟಲೆ ಕಟ್ಟಿಗೆ ರವಾನೆಯಾಗುತ್ತಿದೆ. ಈ ಕೃತ್ಯ ಅರಣ್ಯ ಇಲಾಖೆ ಗಮನಕ್ಕೆ ಬಂದರೂ ರಾಜಕೀಯ ಒತ್ತಡದಿಂದ ಅಕ್ರಮ ಕಡಿತಲೆ ಮಾಡಿರುವವರನ್ನು ರಕ್ಷಿಸುವ ಹುನ್ನಾರ ನಡೆದಿದೆ ಎನ್ನತ್ತಾರೆ ಗ್ರಾಮಸ್ಥರು.
ಇದೇ ರೀತಿ ಚಟುವಟಿಕೆ ಮುಂದುವರೆದರೆ ಇಡೀ ಬರಿಗೆ ಕಾನು ಬಯಲು ನಾಡಾಗುತ್ತದೆ. ವಿಶೇಷವಾಗಿ ಈ ಕಾಡು ಈಚೆಗೆ ತೀರ ಘಾಸಿಗೊಳಗಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ .
ಜೀವವೈವಿಧ್ಯತೆಗೆ ಧಕ್ಕೆ: ಬರಿಗೆ ಕಾನು ಪ್ರದೇಶದಲ್ಲಿ ಅಪರೂಪದ ಚಿಟ್ಟಳಿಲು, ಬರ್ಕ, ಕಬ್ಬೆಕ್ಕು, ಚಿಪ್ಪುಹಂದಿ, ಮುಳ್ಳು ಹಂದಿ ಅಪರೂಪಕ್ಕೆ ಕಾಣಿಸಿಕೊಂಡಿದ್ದು, ಅಗತ್ಯ ಆಹಾರ ದೊರಕದ ಕಾರಣ ಕಣ್ಮರೆಯಾಗುತ್ತಿವೆ.
ಅಪರೂಪದ ಗಿಡಮೂಲಿಕೆಗಳಾದ ಸರ್ಪಗಂಧಿ, ಇಸಮುಂಗರಿ, ಹಿರೆಮದ್ದಿನ ಗಿಡ, ಅಮೃತಬಳ್ಳಿ, ಚಿತ್ರಾಮೂಲ, ಝರಿಗಿಡ   ಸೇರಿದಂತೆ  ಬೆಲೆ ಬಾಳುವ ಹೊನ್ನೆ, ಬೀಟೆ, ದೇವದಾರು, ತೇಗ, ಮಸಿ, ಮುಂತಾದ ಮರಗಳು ಇಲ್ಲಿ ವಿನಾಶದ ಅಂಚಿನಲ್ಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement