ರಾಜ್ಯ ಸರ್ಕಾರದ ಕ್ರಮಕ್ಕೆ ಖಂಡನೆ
ಮೂಡಿಗೆರೆ: ಶೃಂಗೇರಿ ಬಳಿಯ ಚೆಕ್ಪೋಸ್ಟ್ ಬಳಿ ನಡೆದ ಎನ್ಕೌಂಟರ್ನಲ್ಲಿ ಸಾವನಪ್ಪಿದ ದನಗಳ್ಳ ಕಬೀರ್ ಕುಟುಂಬಕ್ಕೆ ರಾಜ್ಯ ಸರ್ಕಾರವು ಪರಿಹಾರ ಘೋಷಣೆ ಮಾಡಿರುವುದನ್ನು ಬಿಜೆಪಿ ವಕ್ತಾರ ಕಣಚೂರು ವಿನೋದ್ ಖಂಡಿಸಿದ್ದಾರೆ.
ಕಬೀರ್ ಮತ್ತು ಸಂಗಡಿಗರು ಬಹಳ ಕಾಲದಿಂದಲೂ ದನಗಳನ್ನು ಕದ್ದು ಕಸಾಯಿಖಾನೆಗೆ ಮಾರಾಟ ಮಾಡುತ್ತಿದ್ದರು. ಈ ಹಿಂದೆ ದನಗಳನ್ನು ಕದ್ದು ಸಾಗಿಸುವಾಗ ಸಿಕ್ಕಿಬಿದ್ದಿದ್ದರು. ಈಗ ಮತ್ತೊಮ್ಮೆ ಚಿಕ್ಕದಾದ ವಾಹನದಲ್ಲಿ 20ಕ್ಕೂ ಹೆಚ್ಚು ದನಗಳನ್ನು ಸಾಗಿಸುತ್ತಿದ್ದರು ಎಂದು ಆರೋಪಿಸಿದ್ದಾರೆ. ಹಿಂದಿನ ಸರ್ಕಾರ ಜಾರಿಗೆ ತರಲು ಯೋಜಿಸಿದ್ದ ಗೋಹತ್ಯಾ ನಿಷೇಧ ಕಾಯ್ದೆಯನ್ನು ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ರದ್ದುಗೊಳಿಸಿತು. ಅದರ ಫಲವೇ ಈ ಎನ್ಕೌಂಟರ್ ಆಗಿದೆ ಎಂದು ತಿಳಿಸಿದ್ದಾರೆ.