ಸಂಭ್ರಮದ ಕನ್ನಮ್ಮ ದೇವರ ಸುಗ್ಗಿ
ಬಾಳೆಹೊನ್ನೂರು: ಸಮೀಪದ ಖಾಂಡ್ಯ ಹೋಬಳಿ ಕಡವಂತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಳಗೊಳ ಗ್ರಾಮದ ಕನ್ನಮ್ಮ ಹಾಗೂ ಪರಿವಾರ ದೇವರ ಸುಗ್ಗಿಹಬ್ಬವನ್ನು ಸಂಪ್ರದಾಯ ಬದ್ಧವಾಗಿ ಚೌತ ಆಚರಿಸುವುದರೊಂದಿಗೆ ಶ್ರದ್ಧಾಪೂರ್ವಕವಾಗಿ ನಡೆಸಲಾಯಿತು.
ಸುತ್ತಮುತ್ತಲಿನ ಗ್ರಾಮಗಳಾದ ಬೊಗಸೆ, ಕಡವಂತಿ, ಕಾಡುಬೈಲ್, ಸಿರವಾಸೆ, ಉಜ್ಜಯಿನಿ, ಬಾಸಾಪುರ, ಬಿದರೆಯ ಸಾವಿರಾರು ಭಕ್ತರು ಸುಗ್ಗಿ ಹಬ್ಬದಲ್ಲಿ ಭಾಗಿಯಾದರು. ವಿಶ್ವ ಹಿಂದೂ ಪರಿಷತ್ನ ಮುಖಂಡ ಶಿವಶಂಕರ್, ಬಾಸಾಪುರದ ಬೋಜೇಗೌಡ, ಬಿ.ನಿ. ವಿಶ್ವನಾಥ್, ರಘು ಕಟ್ಟೆಹೊಳೆ, ಬಿಳಗೊಳ ರಮೇಶ್, ಬಿ.ಎನ್. ಮುಳ್ಳೇಶ್ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.