ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನೀರಿನ ಸಮಸ್ಯೆ ನಿವಾರಿಸಲು ರು. 50 ಲಕ್ಷ

Rashmi Kasaragodu
Updated On : 23 Apr 2014, 11:43 am


ಚಿಕ್ಕಮಗಳೂರು: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಎಸ್‌ಎಫ್‌ಸಿ 2013 ರ ಸಭೆಯಲ್ಲಿ ರು. 50 ಲಕ್ಷ ರೂ.  ಬಿಡುಗಡೆ ಮಾಡಲಾಗಿದೆ ಎಂದು ನಗರಸಭಾ ಅಧ್ಯಕ್ಷ ಕೆ.ಎಸ್. ಪುಷ್ಪರಾಜು ತಿಳಿಸಿದ್ದಾರೆ.
ಚಿಕ್ಕಮಗಳೂರು ನಗರಸಭೆಯಿಂದ ಸದರಿ ಯೋಜನೆಯಡಿ ಕೈಗೊಳ್ಳಲು ಉದ್ದೇಶಿಸಿದ ಕಾಮಗಾರಿ ಸಂಬಂಧ ಸಭೆಯಲ್ಲಿ ಸವಿವರವಾಗಿ ಚರ್ಚಿಸಲಾಯಿತು ಎಂದು ಹೇಳಿದ್ದಾರೆ. ಮಳೆ ಅಭಾವದಿಂದ ಹಾಗೂ ವಿದ್ಯುತ್ ವ್ಯತ್ಯಯದಿಂದಾಗಿ ನಗರದ ಕೆಲವು ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, ಟ್ಯಾಂಕರ್‌ಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ.
ಇಂತಹ ವಾರ್ಡ್‌ಗಳಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಯಿಸಿ ಮೋಟಾರ್ ಅಳವಡಿಸುವುದು ಹಾಗೂ ಅವಶ್ಯವಿರುವ ಕಡೆ ಹೆಚ್ಚುವರಿ ವಿತರಣಾ ಕೊಳವೆ ಅಳವಡಿಸುವುದರಿಂದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರದ 22 ವಾರ್ಡ್‌ಗಳಲ್ಲಿ ಬೋರ್‌ವೆಲ್ ಕೊರೆಸಿ ಮೋಟಾರ್ ಅಳವಡಿಸಲು ತಲಾ ರು. 1.75 ಲಕ್ಷದಂತೆ ನಿಗದಿಪಡಿಸಲಾಗಿದೆ.
 ಒಟ್ಟು ರು. 38.50 ಲಕ್ಷ ಹಾಗೂ 12 ವಾರ್ಡ್‌ಗಳಲ್ಲಿ ಹಾಲಿ ಇರುವ ಬೋರ್‌ವೆಲ್‌ಗಳಿಗೆ ಫ್ಲಶಿಂಗ್ ಮಾಡಲು ತಲಾ ರು. 40 ಸಾವಿರ ನಿಗದಿಪಡಿಸಿದ್ದು ಒಟ್ಟು ರು. 4.80 ಲಕ್ಷ ಹಾಗೂ 5 ವಾರ್ಡ್‌ಗಳಲ್ಲಿ ಪೈಪ್‌ಲೈನ್ ಅಳವಡಿಸಲು ರು. 6.70 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement