ಬಿಎಸ್ಎನ್ಎಲ್ ಕೇಂದ್ರದಲ್ಲಿ ಅವ್ಯವಸ್ಥೆ: ಗ್ರಾಹಕರ ಪರದಾಟ
ಕ.ಪ್ರ.ವಾರ್ತೆ, ಶೃಂಗೇರಿ, ಏ.22 ಪಟ್ಟಣದಲ್ಲಿ ಬಿಎಸ್ಎನ್ಎಲ್ ದೂರವಾಣಿ ವಿನಿಮಯ ಕೇಂದ್ರದಲ್ಲಿ ಕಳೆದ ಕೆಲ ದಿನಗಳಿಂದ ಅವ್ಯವಸ್ಥೆ ಉಂಟಾಗಿದ್ದು, ಇದರಿಂದ ಗ್ರಾಹಕರು ಪರದಾಡುವಂತಾಗಿದೆ.
ಈ ಕಚೇರಿ ಹಲವು ಮೂಲ ಸೌಕರ್ಯದಿಂದ ವಂಚಿತವಾಗಿದ್ದು, ಅಲ್ಲದೇ ಇಲ್ಲಿ ಕಚೇರಿಯ ಕಾರ್ಯನಿರ್ವಹಣೆಯಲ್ಲಿಯೂ ಲೋಪದೋಷ ಕಂಡುಬರುತ್ತಿವೆ. ಈಗ್ಗೆ 15 ದಿನದಿಂದ ಇಲ್ಲಿನ ಕಂಪ್ಯೂಟರ್ ವ್ಯವಸ್ಥೆ ಹಾಳಗಿದ್ದರಿಂದ ಬಿಲ್ ಪಾವತಿ, ಸಿಮ್ಕಾರ್ಡ್ ಪಡೆಯುವುದೂ ಸೇರಿದಂತೆ ಹಲವು ಸೇವೆಗಳು ನಿಷ್ಕ್ರಿಯಗೊಂಡಿದೆ. ದೂರದೂರದ ಹಳ್ಳಿಗಳಿಂದ ಬರುವ ಗ್ರಾಹಕರು ಇಲ್ಲಿನ ಅವ್ಯವಸ್ಥೆ ಕಂಡು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಶಾಪ ಹಾಕುತ್ತಾ ವಾಪಸಾಗುತ್ತಿದ್ದಾರೆ.
ಬಿಲ್ಕಟ್ಟಲು ದೂರದ ಹಳ್ಳಿಗಳಿಂದ ಗ್ರಾಹಕರು ಬಂದು ಬಿಲ್ ಕಟ್ಟಲಾಗದೇ ವಾಪಸ್ಸು ಹೋಗುತ್ತಿದ್ದಾರೆ ಎನ್ನುತ್ತಾರೆ ಗ್ರಾಹಕ ಅನಂತಮೂರ್ತಿ, ಮೆಣಸೆ ಗಣೇಶ್ ಮೊದಲಾದವರು.