ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕೌಶಲ್ಯ ಗಳಿಸಲು ತರಬೇತಿ ಅಗತ್ಯ: ಮದೋಶ್ ಪೂವಯ್ಯ

Rashmi Kasaragodu
Updated On : 25 Apr 2014, 10:28 am

ಕ.ಪ್ರ.ವಾರ್ತೆ ಟಿ ಮೂಡಿಗೆರೆ ಟಿ ಏ.24
ಜೀವನದಲ್ಲಿ ಪ್ರತಿಯೊಂದು ರಂಗದಲ್ಲಿ ಕೌಶಲ್ಯ ಗಳಿಸಲು ತರಬೇತಿ ಅಗತ್ಯವೆಂದು ಜೆಸಿಐ ವಲಯಾಧ್ಯಕ್ಷ ಮದೋಶ್ ಪೂವಯ್ಯ ಹೇಳಿದರು.
ಮೂಡಿಗೆರೆ ಜೆಸಿಐ ವತಿಯಿಂದ ಹಮ್ಮಿಕೊಂಡಿದ್ದ ವಲಯ ಮಟ್ಟದ ಅವಾರ್ಡ್ ಓರಿಯಂಟೇಷನ್ ಸೆಮಿನಾರ್ ಉದ್ಘಾಟಿಸಿ ಮಾತನಾಡಿ, ವ್ಯಕ್ತಿಯೊಬ್ಬ ಯಶಸ್ಸಿನೆಡೆಗೆ ಸಾಗಲು ಸಮರ್ಪಕ ಮಾರ್ಗದರ್ಶನ ಪಡೆಯಬೇಕು. ಸೂಕ್ತ ತರಬೇತಿ ಮೂಲಕ ವ್ಯಕ್ತಿಯಲ್ಲಿರುವ ಪ್ರತಿಭೆಗೆ ಸಾಣೆ ಹಿಡಿದು ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ಆ ನಿಟ್ಟಿನಲ್ಲಿ ಜೆಸಿಐ ಸಂಸ್ಥೆ ವಿದ್ಯಾರ್ಥಿ ಯುವಜನರಿಗೆ ಹಲವು ಉತ್ತಮ ತರಬೇತಿ ಆಯೋಜಿಸುತ್ತಾ ಬಂದಿದೆ ಎಂದರು.
ತರಬೇತುದಾರರಾದ ಮೈಸೂರು ಸುರೇಶ್ ಹಾಗೂ ರೇಣುಕಾನಂದ ಅವರು ಜೆಸಿಐ ವಲಯ 14ರ ವಿವಿಧ ಘಟಕಗಳಿಂದ ಆಗಮಿಸಿದ್ದ ಘಟಕಾಧಿಕಾರಿಗಳಿಗೆ ತರಬೇತಿ ನೀಡಿದರು.
ಜೆಸಿಐ ಮೂಡಿಗೆರೆ ಅಧ್ಯಕ್ಷರಾದ ರತೀಶ್ ಬಟ್ಟಗೆರೆ, ಮಾಜಿ ಅಧ್ಯಕ್ಷ ದಿನೇಶ್ ಮುಗ್ರಹಳ್ಳಿ ಇದ್ದರು. ಕಾರ್ಯಕ್ರಮ ನಿರ್ದೇಶಕ ಕೆ.ಎನ್. ರವಿ ಸ್ವಾಗತಿಸಿ, ಕಾರ್ಯದರ್ಶಿ ನಾಗೇಶ್ ಮಾಡ್ಕಲ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement