ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಘಟನೆಗೆ ಕಾನೂನು ಪರಿಧಿ ಇರಬೇಕೇ ಹೊರತು ಕೋಮು ಭಾವನೆಯಲ್ಲ

Rashmi Kasaragodu
Updated On : 25 Apr 2014, 10:25 am

ಚಿಕ್ಕಮಗಳೂರು: ತನಿಕೋಡು ಪ್ರಕರಣದಿಂದಾಗಿ ಸಮಾಜದಲ್ಲಿ ಸೌಹಾರ್ದ ಮತ್ತು ಸಾಮರಸ್ಯಕ್ಕೆ ಧಕ್ಕೆ ಬಂದಿದೆ. ಘಟನೆಗೆ ಕಾನೂನು ಪರಿದಿ ಇರಬೇಕೆ ಹೊರತು ಜಾತಿ, ಕೋಮು ಭಾವನೆ ಇರಬಾರದು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಆರ್. ಪ್ರೇಂಕುಮಾರ್ ಹೇಳಿದ್ದಾರೆ.
ತನಿಕೋಡು ಘಟನೆ ದುರಾದೃಷ್ಟಕರ ಮತ್ತು ವಿಷಾದನೀಯ. ಇದು ನಡೆಯಬಾರದಿತ್ತು. ಆದರೆ, ಪ್ರಕರಣದ ಬಳಿಕ ಇದು ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿದೆ. ಒಂದು ವರ್ಗಕ್ಕೆ ವಿರುದ್ಧವಾಗಿ ಹೇಳಿಕೆ ನೀಡಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ಹೇಳಿದರು.
ಓಡುವ ಅಗತ್ಯವೇನಿತ್ತು? ಜಾನುವಾರುಗಳನ್ನು ಸಾಗಿಸಲು ಪರವಾನಗಿ ಹೊಂದಿದ್ದರೂ ತನಿಕೋಡಿಗೆ ಬರುವ ಮೊದಲು ಸಿಕ್ಕಿರುವ ಚೆಕ್‌ಪೋಸ್ಟ್‌ಗಳಲ್ಲಿ ಪರವಾನಗಿ ತೋರಿಸಿ ಮುಂದೆ ಸಾಗಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಈ ಚೆಕ್‌ಪೋಸ್ಟ್‌ಗೆ ಬರುವ ಮೊದಲು ಯಾವುದೇ ತಪಾಸಣಾ ಠಾಣೆಗಳಿಲ್ಲ. ಪರವಾನಗಿ ಹೊಂದಿದ್ದರೆ ಬೆಳಗಿನ ಜಾವ 3.30ಕ್ಕೆ ಬರುವ ಕಾರಣ ಏನಿತ್ತು, ಪೊಲೀಸರನ್ನು ನೋಡಿ ಏಕೆ ಓಡಿ ಹೋಗಲು ಯತ್ನಿಸಬೇಕಾಗಿತ್ತೆಂದು ಪ್ರಶ್ನಿಸಿದ್ದಾರೆ.
ತನಿಕೋಡು ಅರಣ್ಯ ತಪಾಸಣಾ ಗೇಟ್ ನಕ್ಸಲ್ ಪ್ರಭಾವ ಹೊಂದಿರುವ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಅಷ್ಟು ಹೊತ್ತಿನಲ್ಲಿ ಜನರು ಬಂದರೆ ಅನುಮಾನ ಬರುವುದು ಸಹಜ.  ತನಿಖೆ ವರದಿ ಬರುವ ಮೊದಲೇ ಪರಿಹಾರ ಕೊಡಿಸುವ ಮನೋವೃತ್ತಿ ಸರಿಯಲ್ಲ. ಮಲೆನಾಡು ಭಾಗದಲ್ಲಿ ಅಕ್ರಮ ಗೋ ಸಾಗಾಣೆಗೆ ದೊಡ್ಡ ಜಾಲವೇ ಇವೆ ಎಂದರು.ಸುದ್ದಿಗೋಷ್ಠಿಯಲ್ಲಿ ನಗರ ಬಿಜೆಪಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement