ವರದೇಂದ್ರ ತೀರ್ಥರ ರಥಕ್ಕೆ ಸ್ವಾಗತ
ಚಿಕ್ಕಮಗಳೂರು: ಮುಂಬಯಿಯಲ್ಲಿ ನಡೆಯಲಿರುವ ವರದೇಂದ್ರ ತೀರ್ಥರ ಶತಮಾನೋತ್ಸವ ಪುಣ್ಯತಿಥಿ ಅಂಗವಾಗಿ ವರದೇಂದ್ರ ತೀರ್ಥ ಶ್ರೀಗಳ ಭಾವಚಿತ್ರದಿಂದ ಅಲಂಕೃತಗೊಂಡ ರಥವು ಗುರುವಾರ ನಗರಕ್ಕೆ ಆಗಮಿಸಿತು.
ದೇಶದಾದ್ಯಂತ ಚಲಿಸಿ ಗುರುವಾರ ನಗರಕ್ಕೆ ಆಗಮಿಸಿದ ರಥವನು ಶಾರದಾ ಪೈ ಕಲ್ಯಾಣ ಮಂಟಪದ ಆಡಳಿತ ಮಂಡಳಿ ವತಿಯಿಂದ ಅದ್ಧೂರಿ ಸ್ವಾಗತ ನೀಡಿ, ಮೆರವಣಿಗೆಯ ಮೂಲಕ ಕಲ್ಯಾಣ ಮಂಟಪಕ್ಕೆ ತರಲಾಯಿತು. ನಂತರ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಿತು.
ಮೆರವಣಿಗೆಯಲ್ಲಿ ಜಯಂತ್ ಪೈ, ಡಾ. ಯಶ್ವಂತ್ ಪ್ರಭು, ಕೃಷ್ಣಪ್ರಭು, ಮುರಳಿಧರ ಕಿಣಿ, ಲಕ್ಷ್ಮಣ್ ಕಾಮತ್ ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.