ಅಪರಿಚಿತ ವ್ಯಕ್ತಿ ಸಾವು, ಕೊಲೆ ಶಂಕೆ
ಬೀರೂರು: ಯಗಟಿ ರಸ್ತೆಯ ರುದ್ರಭೂಮಿಯ ಸಮೀಪ ಕೆಲವೆ ದೂರದ ಹೊಲವೊಂದರಲ್ಲಿ ಶುಕ್ರವಾರ ಅಪರಿಚಿತ ಶವವೊಂದು ಪತ್ತೆಯಾಗಿದ್ದು, ತಲೆಗೆ ಹೆಚು ಪೆಟ್ಟು ಬಿದ್ದು ಮೃತಪಟ್ಟಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಬೀರೂರಿನ ಹಾಲಪ್ಪ ಬಡಾವಣೆಯ ನಿವಾಸಿ ರವಿ(36) ಎಂಬ ವ್ಯಕ್ತಿಯೆಂದು ಗುರುತಿಸಲಾಗಿದ್ದು, ಈತ ಕಳೆದ 15 ವರ್ಷದ ಹಿಂದೆ ವಿವಾಹಿತನಾಗಿದ್ದು, 8 ವರ್ಷದಿಂದ ಪತ್ನಿಯ ಜತೆಯಲ್ಲಿರಲಿಲ್ಲ.
ಏ. 23 ರಂದು ದಾಸರಹಳ್ಳಿಯಲ್ಲಿದ್ದ ಪತ್ನಿಯನ್ನು ಕರೆತರಲು ಹೋಗುವುದಾಗಿ ಮನೆಯಲ್ಲಿ ತಿಳಿಸಿ ತೆರಳಿದ್ದ ಎಂದು ಮೃತ ರವಿಯವರ ಅಣ್ಣ ರಾಜು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.