ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಎಎನ್‌ಎಫ್ ಸಿಬ್ಬಂದಿ ಅಮಾನತುಗೊಳಿಸದಿರಿ

Rashmi Kasaragodu
Updated On : 26 Apr 2014, 11:28 am

ಚಿಕ್ಕಮಗಳೂರು: ಶೃಂಗೇರಿಯ ತನಿಕೋಡಿನಲ್ಲಿ ನಡೆದ ಕಬೀರ್ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎನ್‌ಎಫ್ ಸಿಬ್ಬಂದಿಯನ್ನು ಅಮಾನತುಗೊಳಿಸಬಾರದು ಎಂದು ಜನಜಾಗೃತಿ ಸಮಾಜ ಸೇವಾ ಸಂಸ್ಥೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಈ ಸಂಬಂಧ ಸಂಸ್ಥೆ ಅಧ್ಯಕ್ಷ ಅನಿಲ್ ಆನಂದ್ ಹಾಗೂ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯಕರಾದ ರುದ್ರಪ್ಪ ಜಿ. ರಾವ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಘಟನೆಯಲ್ಲಿ ಮೃತಪಟ್ಟ ಕಬೀರ್ ಅವರ ಕುಟುಂಬಕ್ಕೆ ಹೆಚ್ಚುವರಿಯಾಗಿ ಪರಿಹಾರಧನವನ್ನು ನೀಡಬಾರದು ಎಂದು ಒತ್ತಾಯಿಸಿದರು.
ಸಂಸ್ಥೆಯ ಪುನೀತ್, ಜೆ. ಸತ್ಯನಾರಾಯಣ, ಚೇತನ ಲೋಕ ಫೌಂಡೇಷನ್ ಅಧ್ಯಕ್ಷ ಚೇತನ್ ಕುಮಾರ್, ಕುಮಾರ್, ಕನ್ನಡ ಸಂಘದ ಚಂದ್ರಶೇಖರ್, ಸತೀಶ್, ಜಿಲ್ಲಾ ಛಾಯಾಗ್ರಾಹರ ಸಂಘದ ಪ್ರಧಾನ ಕಾರ್ಯದರ್ಶಿ ಕಾರ್ಗಿಲ್ ಸೋಮಶೇಖರ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement