ಕೆರೆಯಲ್ಲಿ ಮುಳುಗಿ ವ್ಯಕ್ತಿ ಸಾವು
ಬೀರೂರು: ಇಲ್ಲಿಗೆ ಸಮೀಪದ ಬಿ.ಕೋಡಿಹಳ್ಳಿಗೆ ಹೊಂದಿಕೊಂಡಂತಿರುವ ದೇವನಕೆರೆಯಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಜೋಡಿತಿಮ್ಮಾಪುರದ ಧರಣಿ(18) ಕೆರೆಯಲ್ಲಿ ಮುಳುಗಿ ಶುಕ್ರವಾರ ಸಂಜೆ ಮೃತಪಟ್ಟಿದ್ದಾನೆ.
ಜೋಡಿತಿಮ್ಮಾಪುರ 10ಕ್ಕೂ ಹೆಚ್ಚಿನ ಸ್ನೇಹಿತರ ಜತೆ ಈಜಲು ತೆರಳಿದ್ದಾಗ ಈ ಘಟನೆ ಸಂಭವಿಸಿದೆ. ಬೀರೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.