ಜಾತ್ರೋತ್ಸವ: ಕಳಸಪೂಜೆ
ಹಿರಿಯೂರು: ಇಲ್ಲಿನ ಹುಳಿಯಾರ್ ರಸ್ತೆಯ ಭಗವತಿ ಅಮ್ಮನವರ ದೇವಸ್ಥಾನದ ಜಾತ್ರಾ ಮಹೋತ್ಸವ ಅಂಗವಾಗಿ ಹಾಗೂ ವರುಣನ ಕೃಷೆಗಾಗಿ ಸುಮಂಗಲಿಯರಿಂದ ವಿಶೇಷ ಕಳಶ ಪೂಜೆ, ದೇವತಾ ಕಾರ್ಯವನ್ನು ನಡೆಸಲಾಯಿತು. ತಮಿಳುನಾಡಿನ ನಾಮಕಲ್ ನೃತ್ಯ ಕಲಾ ತಂಡದ 25-30 ಸದಸ್ಯರು ತಮ್ಮ ಅಮೋಘ ನೃತ್ಯ ರೂಪಕಗಳಿಂದ ಭಕ್ತರನ್ನು ರಂಜಿಸಿದರು. ದೇವಸ್ಥಾನದ ಧರ್ಮದರ್ಶಿಗಳಾದ ಕೆಂಪು ಕಾಳಿಯಪ್ಪ ಗೌಂಡರ್, ಕಾರ್ಯದರ್ಶಿ ಆರ್ಮುಗಂ, ದೇವಸ್ಥಾನದ ಕಾರ್ಯಕಾರಿ ಮಂಡಳಿ ಸದಸ್ಯ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಎ.ಮಂಜುನಾಥ್, ಪುರಸಭೆ ಅಧ್ಯಕ್ಷ ಜಬೀವುಲ್ಲಾ, ಉಪಾಧ್ಯಕ್ಷ ರವಿಚಂದ್ರ ನಾಯ್ಕ, ಜೈರಾಜ್, ಎನ್.ಸುಂದರ್, ಅಂಗಮುತ್ತು, ಭಕ್ತರು ಪಾಲ್ಗೊಂಡಿದ್ದರು.