ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವರದಿಗೆ ಮುನ್ನವೇ ಪ್ರಕರಣ ದಾಖಲು ಸರಿಯಲ್ಲ

Rashmi Kasaragodu
Updated On : 26 Apr 2014, 11:27 am

ನರಸಿಂಹರಾಜಪುರ: ತನಿಕೋಡು ಚೆಕ್ ಪೋಸ್ಟ್ ಸಮೀಪದಲ್ಲಿ ಎಎನ್‌ಎಫ್ ಗುಂಡಿಗೆ ಕಬೀರ್ ಎಂಬ ವ್ಯಕ್ತಿ ಮೃತರಾದ ಪ್ರಕರಣದ ತನಿಖೆಗೆ ಸಿಐಡಿ ಹಾಗೂ ನ್ಯಾಯಂಗ ತನಿಖೆಗೆ ಒಪ್ಪಿಸಿರುವ ಸಂದರ್ಭದಲ್ಲಿ ವರದಿ ಬರುವ ಮುನ್ನವೇ ಎನ್‌ಎನ್‌ಎಫ್ ಸಿಬ್ಬಂದಿ ಮೇಲೆ ಸರ್ಕಾರ ಕೇಸು ದಾಖಲಿಸಿರುವುದು ಖಂಡನೀಯ ಎಂದು ಶಾಸಕ ಡಿ.ಎನ್. ಜೀವರಾಜ್ ತಿಳಿಸಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿಷೇಧಿತ ಪ್ರದೇಶವಾದ ತನಿಕೋಡು ಚೆಕ್‌ಪೋಸ್ಟ್‌ನಲ್ಲಿ ಈ ಘಟನೆ ನಡೆದಿರುವುದು ಮಧ್ಯರಾತ್ರಿಯಲ್ಲಿ. ಆ ಸಂದರ್ಭದಲ್ಲಿ ಏನು ನಡೆಯಿತು ಎಂಬ ಸತ್ಯ ತನಿಖೆಯಿಂದ ಹೊರ ಬೀಳಲಿದೆ.
ನೈತಿಕ ಸ್ಥೈರ್ಯ ಕುಸಿತ: ಸರ್ಕಾರ ಸತ್ಯಾಸತ್ಯತೆಗಾಗಿ ಸಿಐಡಿ ಹಾಗೂ ನ್ಯಾಯಾಂಗ ತನಿಖೆ ಮಾಡಲು ಆದೇಶ ನೀಡಿದೆ. ಈ ತನಿಖೆಯ ವರದಿ ಬರುವ ಮುನ್ನವೇ ಸರ್ಕಾರ ಎಎನ್‌ಎಫ್ ಸಿಬ್ಬಂದಿ ಮೇಲೆ ಕೇಸು ದಾಖಲಿಸಿದರೆ ಅವರ ನೈತಿಕ ಸ್ಥೈರ್ಯ ಕುಸಿಯುತ್ತದೆ ಎಂದವರು ಹೇಳಿದರು.
ನನಗೆ ಬಂದ ಮಾಹಿತಿ ಪ್ರಕಾರ ಆ ಭಾಗವು ನಕ್ಸಲೈಟ್ ಏರಿಯಾ ಆಗಿರುವುದರಿಂದ ಚುನಾವಣಾ ಸಮಯಲ್ಲಿ ಯಾವುದಾದರೂ ಅಹಿತಕರ ಘಟನೆ ನಡೆಯಬಹುದು ಎಂದು ಎ.ಎನ್.ಎಫ್ ಹಾಗೂ ಪೊಲೀಸರು ಜಾಗೃತರಾಗಿದ್ದರು. ಮತ ಪೆಟ್ಟಿಗೆಯನ್ನು ಚಿಕ್ಕಮಗಳೂರಿನಿಂದ ಉಡುಪಿಗೆ ಕೊಂಡೊಯ್ಯಬೇಕಾದರೆ ಎರಡು ಘಾಟಿಯಲ್ಲಿ ಪ್ರಯಾಣಿಸಬೇಕಾಗಿದೆ. ಇಂತಹ ಸ್ಥಿತಿಯಲ್ಲಿ ಮಧ್ಯರಾತ್ರಿ ವಾಹನದಲ್ಲಿ ಬಂದವರನ್ನು ನಿಲ್ಲಿಸಿ ದಾಖಲೆ ಕೇಳಿದಾಗ ಓಡಿ ಹೋಗುವ ಪ್ರಯತ್ನ ಮಾಡಿದ್ದರಿಂದ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಜೀವರಾಜ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement