ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನ್ಯಾಯಾಂಗ ಗಟ್ಟಿಗೊಳಿಸುವ ಉದ್ದೇಶ: ಕಾಂತರಾಜು

Rashmi Kasaragodu
Updated On : 27 Apr 2014, 2:17 am

ತರೀಕೆರೆ: ಪ್ರಕರಣದ ಸೋಲು- ಗೆಲುವು ಮುಖ್ಯವಲ್ಲ, ನ್ಯಾಯಾಂಗ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಮೂಲಕ ಕಕ್ಷಿದಾರರಿಗೆ ನ್ಯಾಯ ಒದಗಿಸಿಕೊಡುವುದೇ ಅಂತಿಮ ಉದ್ದೇಶ ಆಗಬೇಕು ಎಂದು ರಾಜ್ಯ ಹೆಚ್ಚುವರಿ ಅಡ್ವೋಕೇಟ್ ಜನರಲ್ ಕಾಂತರಾಜು ತಿಳಿಸಿದರು.
ಶನಿವಾರ ರಾಜ್ಯ ವಕೀಲರ ಪರಿಷತ್ತು, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ವತಿಯಿಂದ ನ್ಯಾಯಾಲಯ ಆವರಣದಲ್ಲಿಏರ್ಪಡಿಸಲಾಗಿದ್ದ 5 ದಿನಗಳ ಕಾನೂನು ಕಾರ್ಯಾಗಾರ ಉದ್ಘಾಟಿಸಿ ನೆರವೇರಿಸಿ ಮಾತನಾಡಿದರು.
ದೂರುವಂತಾಗಬಾರದು: ಕಕ್ಷಿದಾರ ತನ್ನ ಪ್ರಕರಣದ ಸೋಲಿಗೆ ದಾಖಲೆ ಇಲ್ಲವೇ ಜಾರಿಯಲ್ಲಿರುವ ಕಾನೂನು ಎಂಬುದನ್ನು ಮನದಟ್ಟು ಆಗುವಂತೆ ಇರಬೇಕೇ ಹೊರತು, ವಕೀಲರನ್ನು ಅಥವಾ ನ್ಯಾಯಾಧೀಶರನ್ನು ದೂರುವ ಪರಿಸ್ಥಿತಿ ಉದ್ಭವಿಸಲು ಅವಕಾಶ ಕಲ್ಪಿಸಿಕೊಡಬಾರದು, ಇಲ್ಲವಾದಲ್ಲಿ ನ್ಯಾಯಾಂಗ ವ್ಯವಸ್ಥೆಗೆ ದಕ್ಕೆ ಒದಗಲಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಿದಾಯತ್ ಉಲ್ಲಾ ಷರೀಫ್ ಮಾತನಾಡಿ, ವಕೀಲಿ ವೃತ್ತಿ ನಿಂತ ನೀರಲ್ಲ. ಸದಾ ಚಲನಶೀಲತೆಯಿಂದ ಕೂಡಿದ್ದು, ವಕೀಲರು ಮತ್ತು ನ್ಯಾಯಾಧೀಶರು ಸದಾ ವಿದ್ಯಾರ್ಥಿಗಳಾಗಿರುತ್ತಾರೆ. ಜೀವನದಲ್ಲಿ ಮೌಲ್ಯ ಅತಿಮುಖ್ಯ, ವೃತ್ತಿ ಗೌರವಕ್ಕೆ ಕುಂದುಂಟಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ವಕೀಲರ ಮೇಲಿದೆ ಎಂದು ತಿಳಿಸಿದರು.
ಆಧುನಿಕ ವೃತ್ತಿ ವ್ಯವಸ್ಥೆ: ರಾಜ್ಯ ವಕೀಲರ ಪರಿಷತ್ ಸದಸ್ಯ ಜೆ.ಎಂ.ಅನಿಲ್‌ಕುಮಾರ್ ಮಾತನಾಡಿ, ತರಬೇತಿ ಮೂಲಕ ವಕೀರನ್ನು ಪಾರಂಪರಿಕ ವೃತ್ತಿ ವ್ಯವಸ್ಥೆಯಿಂದ, ಆಧುನಿಕ ವೃತ್ತಿ ವ್ಯವಸ್ಥೆ ಕಡೆಗೆ ಕೊಂಡೊಯ್ಯುವ ಪ್ರಯತ್ನ ಸಾಗಿದೆ ಎಂದು ತಿಳಿಸಿದರು.
ಸಿವಿಲ್ ನ್ಯಾಯಾಧೀಶ ಶಂಕರಪ್ಪ ಮಲ್ಲಿಕಾರ್ಜುನಪ್ಪ ಅರುಟಗಿ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಬದಲಾವಣೆಯ ಜೊತೆ ಜೊತೆಯಲ್ಲಿ ವಕೀಲರು ಸಾಗುವ ಅಗತ್ಯತೆ ಇದೆ. ಅಧುನಿಕ ತಂತ್ರಜ್ಞಾನದ ಬಳಕೆಗೆ ವಕೀಲರು ಮುಂದಾಗುವ ಮೂಲಕ ಹೊಸತನಕ್ಕೆ ಹೆಜ್ಜೆ ಇಡಬೇಕು ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಟಿ.ಎಲ್.ಪ್ರಕಾಶ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವೃತ್ತಿ ಮೌಲ್ಯ ಕುರಿತು ಜೆ.ಎಂ.ಅನಿಲ್ ಕುಮಾರ್, ನಿರ್ದಿಷ್ಟ ಪರಿಹಾರ ಕಾಯಿದೆ ಕುರಿತು ಎಚ್. ಕಾಂತರಾಜು  ಮಾತನಾಡಿದರು.
ಸಿವಿಲ್ ನ್ಮಾಯಾಧೀಶರಾದ ಜಯಲಕ್ಷ್ಮಿ, ಅಪರ ಸರ್ಕಾರಿ ವಕೀಲ ಟಿ.ಕೆ. ನಂದೀಶ್ವರಯ್ಯ, ವಕೀಲರಾದ   ಕೆ. ಲಿಂಗರಾಜು, ಅಬ್ದುಲ್ ರಜಾಕ್, ತಿಮ್ಮಯ್ಯ, ಸತೀಶ್‌ಕುಮಾರ್,  ಕಿರಣ್‌ಕುಮಾರ್, ತೇಜುಮೂರ್ತಿ, ಕಾರ್ಯದರ್ಶಿ ನಾಗಭೂಷಣ್, ಖಚಾಂಚಿ ಜಗದೀಶ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement