ಉರುಸ್ ಸಂದಲ್ ಉತ್ಸವ ಇಂದು
ನರಸಿಂಹರಾಜಪುರ: ಪ್ರವಾಸಿ ಮಂದಿರದ ಸಮೀಪದ ದರ್ಗಾದಲ್ಲಿ ದರ್ಗಾಯೆ ಹಜ್ರತ್ ಸೈಯದ್ ಹಯಾತ್ 125ನೇ ಉರುಸ್ ಸಂದಲ್ ಉತ್ಸವವು ಏಪ್ರಿಲ್ 28ರ ಸೋಮವಾರ ನಡೆಯಲಿದೆ ಎಂದು ಉರುಸ್ ಸಮಿತಿ ಅಧ್ಯಕ್ಷ ಮುನಾವರ್ ಪಾಷಾ ತಿಳಿಸಿದ್ದಾರೆ.
ಸೋಮವಾರ ಸಂಜೆ 4 ಗಂಟೆಗೆ ಸಂದಲ್ ಉತ್ಸವವು ದರ್ಗಾದಿಂದ ಹೊರಟು ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಿ ಎಲ್ಲಾ ದರ್ಗಾಗಳಿಗೂ ತಲುಪಿ ವಾಪಸ್ ಬರಲಿದೆ. ನಂತರ ದರ್ಗಾಕ್ಕೆ ಬಂದ ಮುರ್ಶದ್ಗಳಿಂದ ಪೂಜಾ ವಿಧಿ ವಿಧಾನಗಳು ನಡೆಯುತ್ತದೆ.
ಸಂಜೆ ನಡೆಯುವ ಸರ್ವಧರ್ಮ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಎಂ.ಶ್ರೀನಿವಾಸ್, ಶಾಸಕ ಡಿ.ಎನ್. ಜೀವರಾಜ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ರಾತ್ರಿ ಧಾರ್ಮಿಕ ಕಾರ್ಯಕ್ರಮ, ಅನ್ನ ಸಂತರ್ಪಣೆ ನಡೆಯಲಿದೆ.
ರಾತ್ರಿ 10 ಗಂಟೆಗೆ ಮದ್ರಾಸಿನ ತೌಸಿಫ್ ಖಾದರಿ ಹಾಗೂ ಹೈದರಾಬಾದಿನ ಫಹೀಮ್ ಅವರಿಂದ ಖವಾಲಿ ಕಾರ್ಯಕ್ರಮ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಕೋರಿದ್ದಾರೆ.