ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರಥೋತ್ಸವ ಮೇ 2ರಂದು

Rashmi Kasaragodu
Updated On : 28 Apr 2014, 11:20 am

ಶಿವಮೊಗ್ಗ: ನಗರದ ಗೋಪಾಳ ಆದಿರಂಗನಾಥಸ್ವಾಮಿ ರಥೋತ್ಸವ ಮೇ 2ರಂದು ನಡೆಯಲಿದೆ.  ಮೇ 1ರಂದು ಬೆಳಗ್ಗೆ 9 ಗಂಟೆಯಿಂದ ಶ್ರೀಗುರು ಗಣೇಶ ಪೂಜೆ, ಯಾಗಶಾಲಾ ಪ್ರವೇಶ, ಕಂಕಣ ಬಂಧನ, ಅಂಕುರಾರ್ಪಣೆ, ನವಕ ಪ್ರಧಾನ ಕಲಶ ಸ್ಥಾಪನೆ, ಕಲಾತತ್ವ ಹೋಮ, ಕುಂಭಾಭಿಷೇಕ, ಗರುಡ ಧ್ವಜ ಸ್ಥಾಪನೆ, ನಡೆಯಲಿದೆ. ಅದೇ ದಿನ ಸಂಜೆ 6.30ರಿಂದ ಪ್ರಾಕಾರೋತ್ಸವ, ಪ್ರಾಕಾರ ನಂತರ ಅಷ್ಟಾವಧಾನ ಸೇವೆ ನಡೆಯುವುದು. ಮೇ 2ರಂು ಬೆಳಿಗ್ಗೆ 8ರಿಂದ ರಥಾಧಿವಾಸ ಹೋಮ, ಪ್ರಾಕಾರ ಬಲಿ ನಂತರ 10.15ಕ್ಕೆ ರಥಾರೋಹಣ, 10.30ಕ್ಕೆ ರಥೋತ್ಸವ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಪ್ರಸಾದ ವಿತರಣೆ ನಡೆಯಲಿದೆ. ಮೇ 3ರಂದು ಬೆಳಿಗ್ಗೆ 9 ರಿಂದ ಪಲ್ಲಕ್ಕಿ ಉತ್ಸವ ನಂತರ ಓಕುಳಿ ಇರುತ್ತದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಜಿ.ಗೋಪಾಲ್ ತಿಳಿಸಿದ್ದಾರೆ.
ಕೃಷ್ಣಪ್ಪ ನಿಧನಕ್ಕೆ
ಸಂತಾಪ
ಶಿವಮೊಗ್ಗ: ಜೆಡಿಎಸ್ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ ನಿಧನಕ್ಕೆ ಜಿಲ್ಲಾ ಮಹಿಳಾ ಯಾದವ (ಗೊಲ್ಲ) ಸಂಘ ಸಂತಾಪ ವ್ಯಕ್ತಪಡಿಸಿದೆ. ಸಂತಾಪ ಸಭೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷೆ ಪುಷ್ಪಾವತಿ, ಎ.ಕೃಷ್ಣಪ್ಪನವರು ಯಾದವ ಸಮುದಾಯದ ಒಬ್ಬ ಸಮರ್ಥ ನಾಯಕರಾಗಿ ಹಿಂದುಳಿದ ವರ್ಗ ಮತ್ತು ಬಡವರ ಏಳಿಗೆಗಾಗಿ ರಾಜಕೀಯದಲ್ಲಿ ತಮ್ಮ ಜೀವನ ಅರ್ಪಿಸಿಕೊಂಡಿದ್ದರು. ಧೀಮಂತ ನಾಯಕನನ್ನು ಕಳೆದುಕೊಂಡ ಸಮುದಾಯ ಶೋಕತಪ್ತವಾಗಿದೆ ಎಂದು ಅಭಿಪ್ರಾಯಪಟ್ಟರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ವಿಶಾಲಾಕ್ಷ್ಮಮ್ಮ, ಕಾರ್ಯದರ್ಶಿ ಎಸ್.ಕೆ.ಶಾರದಮ್ಮ, ನಿರ್ದೇಶಕರು, ಸದಸ್ಯರು ಹಾಜರಿದ್ದರು.
'ದೇವೇಗೌಡರ ಗೆಲವು ಖಚಿತ'
ಕಡೂರು:  ಕಡೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ಹಾಸನ ಲೋಕಸಭಾ ಕ್ಷೇತ್ರದ ಎಲ್ಲೆಡೆ ಜೆಡಿಎಸ್‌ಗೆ ಮತದಾರರು ಹೆಚ್ಚಿನ ಮತ ನೀಡಿರುವುದರಿಂದ ದೇವೇಗೌಡರು ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಯುವ ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಪ್ರಸನ್ನ ಹೇಳಿದ್ದಾರೆ.
ಪ್ರಚಾರ ಯಾತ್ರೆ
ಶಿವಮೊಗ್ಗ: ಇಲ್ಲಿನ ಬಸವ ಕೇಂದ್ರದಿಂದ ಮೇ 27 ರಿಂದ ಯೂರೋಪ್ ದೇಶಗಳಿಗೆ 15 ದಿನಗಳ ಶರಣ ಸಂಸ್ಕೃತಿ ಪ್ರಚಾರ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಆಸಕ್ತಿಯುಳ್ಳವರು ಅಧ್ಯಕ್ಷ ಬೆನಕಪ್ಪರನ್ನು (9945948308) ಸಂಪರ್ಕಿಸಿ.
ಚಿನ್ನಾಭರಣ ಸಾಲ
ಶಿವಮೊಗ್ಗ- ಪದವೀಧರ ಸಹಕಾರ ಸಂಘವು ಕಡಿಮೆ ಬಡ್‌ಡಿ ದರದಲ್ಲಿ ಬಂಗಾರದ ಆಭರಣ ಸಾಲ ಸೌಲಭ್ಯ ಕಲ್ಪಿಸಿದೆ. ಸಂಘದ ಸದಸ್ಯರು ಸದುಪಯೋಗ ಪಡೆದುಕೊಳ್ಳುವಂತೆ ಪದವೀಧರ ಸಹಕಾರ ಸಂಘದ ಕಾರ್ಯದರ್ಶಿ ಟಿ.ವಿ.ಗೋಪಾಲಕೃಷ್ಣ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement