ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಶಂಕರ ಪಂಚಮಿ ಆಹ್ವಾನಕ್ಕೆ ಅಕ್ಷತಾಭಿಯಾನ

Rashmi Kasaragodu
Updated On : 28 Apr 2014, 11:18 am

ಹೊಸನಗರ: ರಾಮಚಂದ್ರಾಪುರಮಠದ ರಾಘವೇಶ್ವರ ಭಾರತೀ ಶ್ರೀಗಳವರ ಮಾರ್ಗದರ್ಶನದಲ್ಲಿ ಭಾನ್ಕುಳಿಯಲ್ಲಿ ಮೇ 3 ರಿಂದ 7 ರವರೆಗೆ ಏರ್ಪಡಿಸಿರುವ ಶಂಕರಪಂಚಮಿ ಸಮಾರಂಭಕ್ಕೆ ಸಾರ್ವಜನಿಕರನ್ನು ಆಮಂತ್ರಿಸಿ, ಮಠದ ಕಾರ್ಯಕರ್ತರು ತಾಲೂಕಿನ ವಿವಿಧ ಕಡೆಗಳಲ್ಲಿ ಭಾನುವಾರ ಅಕ್ಷತಾಭಿಯಾನ ಕಾರ್ಯಕ್ರಮ ನಡೆಸಿದರು.
ಸಿದ್ಧಾಪುರ ಹವ್ಯಕ ಮಂಡಲದ ಮಾತೃ ಪ್ರಧಾನ ಕಲ್ಪನಾ ತಲವಾಟ ನೇತೃತ್ವದಲ್ಲಿ ಮಾತೆಯರು  ಮನೆಮನೆಗೆ   ಭೇಟಿ ನೀಡಿ ಶಂಕರ ಜಯಂತಿ ಮಹತ್ವ ಮತ್ತು ಕಾರ್ಯಕ್ರಮದ ಸ್ವರೂಪ ಕುರಿತು ಮಾಹಿತಿ ನೀಡಿದರು. ಸವಿತಾಶಾಂತಾರಾಂ, ಸುಜಾತ, ಸೀಮಾ, ಅರುಣ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement