ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಯೋಗಗುರು ಬಾಬಾ ರಾಂದೇವ್ ಕೋಮುವಾದಿ: ಮೋಟಮ್ಮ ಟೀಕೆ

Rashmi Kasaragodu
Updated On : 29 Apr 2014, 11:31 am

ಮೂಡಿಗೆರೆ: ಯೋಗಗುರು ಬಾಬಾ ರಾಂದೇವ್ ತೆರೆಮರೆಯಲ್ಲಿ ಕುಳಿತು ರಾಜಕೀಯ ಭಾಷಣ ಮಾಡಿ ದಲಿತರ ಬಗ್ಗೆ ಅವಹೇಳನ ಮಾಡಿರುವುದು ಖಂಡನಾರ್ಹ ಎಂದು ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಸೋಮವಾರ ಕಾಂಗ್ರೆಸ್ ಕಚೇರಿ ಎದುರು ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯ ಬಳಿಕ ಮಾತನಾಡಿದ ಅವರು, ಯೋಗ ಶಿಬಿರ ನಡೆಸುವ ಹೆಸರಿನಲ್ಲಿ ಬಾಬಾ ರಾಜಕೀಯ ನಡೆಸುತ್ತಿದ್ದಾರೆ. ಈ ಮನುಷ್ಯ ಜಾತಿವಾದಿ, ಕೋಮುವಾದಿ ಮತ್ತು ಭೀತಿವಾದಿಯಾಗಿದ್ದಾರೆ. ದೇಶದ ಯಾವುದೇ ಭಾಗಗಳಲ್ಲಿಯೂ ಅವರು ಯಾವುದೇ ಶಿಬಿರ ನಡೆಸಲೂ ಅವಕಾಶ ನೀಡಬಾರದು ಎಂದರು.
ಮತೀಯ ಶಕ್ತಿಗಳ ಮಟ್ಟಹಾಕಿ: ಇತ್ತೀಚೆಗೆ ಬಿಳಗುಳದಲ್ಲಿ ಕೋಮು ಸಾಮರಸ್ಯ ಕದಡುವಂತೆ ಏಳು ಮುಖದ ಚೌಡೇಶ್ವರಿ ದೇಗುಲದ ಪ್ರವೇಶ ದ್ವಾರವನ್ನು ಹಾನಿಗೊಳಿಸಲಾಗಿತ್ತು. ಈ ಪ್ರಕರಣದ ವಾಸ್ತವಾಂಶ ಬಯಲಿಗೆ ತರಲು, ಮತೀಯಶಕ್ತಿಗಳ ಮಟ್ಟಹಾಕಲು ಗೃಹ ಮಂತ್ರಿಗಳ ಗಮನ ಸೆಳೆಯುವುದಾಗಿ ತಿಳಿಸಿದರು.
ಜಿ.ಪಂ.ಸದಸ್ಯ ಎಂ.ಎಸ್.ಅನಂತ್ ಮಾತನಾಡಿ, ಬಿಳಗುಳದ ಏಳುಮುಖದ ಚೌಡೇಶ್ವರಿ ದ್ವಾರದ ಹಾನಿ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸುವ ಮೂಲಕ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು. ಸ್ಥಳೀಯರು ಸಾಮರಸ್ಯದಿಂದ ಜೀವಿಸುವಂತಾಗಬೇಕು ಎಂದು ಆಗ್ರಹಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ.ಮನು, ಕೆಪಿಸಿಸಿ ಮಹಿಳಾ ಘಟಕದ ಟಿ.ಕಮಲಾಕ್ಷಮ್ಮ, ಪ.ಪಂ. ಅಧ್ಯಕ್ಷೆ ಪಾರ್ವತಮ್ಮ, ಸದಸ್ಯರಾದ ಮದೀಶ್, ಸುಲೋಚನಾ, ತಾ.ಪಂ.ಸದಸ್ಯರಾದ ಎ.ಜೆ. ಸುಬ್ರಾಯಗೌಡ, ಸಬಿ ದೇವರಾಜು, ಎಂ.ಎನ್.ಅಶ್ವಥ್, ಎ.ಸಿ.ಅಯ್ಯೂಬ್ ಹಾಜಿ, ಹೊಸಕೆರೆ ರಮೇಶ್, ಮನೋಜ್ ಬಟ್ಟಗೆರೆ, ಬಿಳಗುಳ ಅಹಮ್ಮದ್ ಬಾವು, ಜಿ.ಪಂ.ಸದಸ್ಯ ಮೊಹಿದ್ದೀನ್ ಶೇಟ್ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement