'ಸಂಗೀತದಿಂದ ಮನುಷ್ಯ ಸಂಸ್ಕಾರವಂತನಾಗುತ್ತಾನೆ'
ತರೀಕೆರೆ: ಯುವಕರು ಧನಾತ್ಮಕವಾಗಿ ಯೋಚಿಸಲಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ವಿ. ಹರಿಪ್ರಸಾದ್ ಸಲಹೆ ನೀಡಿದರು.
ಸೋಮವಾರ ಪಟ್ಟಣದ ಎಸ್ಜೆಎಂ ಪ್ರಥಮ ದರ್ಜೆ ಕಾಲೇಜು ವತಿಯಿಂದ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕ್ರೀಡಾ, ಸಾಂಸ್ಕೃತಿಕ, ಎನ್ಎನ್ಎಸ್ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಪಂ. ಡಾ. ಪುಟ್ಟರಾಜ ಗವಾಯಿಗಳ ಶಿಷ್ಯರಾದ ಶಿವಮೊಗ್ಗದ ಗಾಯಕ ಕಲಾವಿದ ಹುಮಾಯೂನ್ ಹರ್ಲಾಪುರ ಅವರು ಮಾತನಾಡಿ, ಸಂಗೀತದಿಂದ ಮನುಷ್ಯ ಸಂಸ್ಕಾರವಂತನಾಗುತ್ತಾನೆ. ಭಗವಂತನ ಸಾಕ್ಷಾತ್ಕಾರಕ್ಕೆ ಸಂಗೀತ ಸಮೀಪವಿದೆ ಎಂದು ಅವರು ತಿಳಿಸಿದರು.
ಪ್ರಾಚಾರ್ಯ ಪ್ರೊ.ಪಿ. ಲಿಂಗಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಪ್ರೊ. ಕೆ.ಆರ್. ವೀರೇಶ್, ಪ್ರೊ. ಬಿ.ಆರ್. ಡಮ್ಮಳ್ಳಿ, ಪ್ರೊ. ಟಿ.ಎನ್. ರಜಪೂತ್, ಪ್ರೊ. ಬಸವರಾಜಪ್ಪ, ಪ್ರೊ. ಆರ್.ವಿ. ಹೆಗಡಾಳ್, ಪ್ರೊ. ಬಿ.ಈ. ಕುಮಾರಪ್ಪ, ಟಿ.ಎಂ. ಶ್ರುತಿ, ಸ್ವಾತಿ ಎಸ್. ರಾವ್, ಸುನೀತ, ಗುರುಮೂರ್ತಿ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.