ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಾಂಗ್ರೆಸ್ನಿಂದ ಜಾತ್ಯತೀತ ಅಭಿವೃದ್ಧಿ: ಸಿಎಂ ಇಬ್ರಾಹಿಂ

Rashmi Kasaragodu
Updated On : 30 Apr 2014, 11:35 am

ಕ.ಪ್ರ.ವಾರ್ತೆ, ತರೀಕೆರೆ, ಏ.29
ಎಲ್ಲಾ ಜಾತಿಯ ಬಡವರಿಗಾಗಿ ಕೆಲಸ ಮಾಡಿದ್ದು, ಯಾವುದೇ ತಾರತಮ್ಯ ಮಾಡಿಲ್ಲ ಎಂದು ಕೇಂದ್ರ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ತಿಳಿಸಿದ್ದಾರೆ.
ಮಂಗಳವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಸಮೀವುಲ್ಲಾ ಷರೀಫ್ ಅವರ ನಿವಾಸದಲ್ಲಿ ಸುದ್ದಿಗಾರರೊಡನೆ ಮಾತನಾಡಿದರು.
ಲೋಕಸಭಾ ಚುನಾವಣೆಯಲ್ಲಿ 18ಕ್ಕೂ ಹೆಚ್ಚು ಸ್ಥಾನ ಕಾಂಗ್ರೆಸ್ಗೆ ದೊರಕುತ್ತದೆ. ಸರ್ಕಾರ ಕೈಗೊಂಡಿರುವ ಜನಪರ ಅಭಿವೃದ್ಧಿ ಕಾರ್ಯ ಜನರಿಗೆ ತಲುಪಿಸುವಲ್ಲಿ ನಾವು ವಿಫಲರಾಗಿದ್ದೇವೆ. ಆರು ತಿಂಗಳ ಹಿಂದೆಯೇ ಈ ಕೆಲಸ ಮಾಡಿದ್ದರೆ, ಮತದಾರರಲ್ಲಿ ವಿಶ್ವಾಸ ಮೂಡಿಸಿದ್ದರೆ ನಮಗೆ ಲೋಕಸಭಾ ಚುನಾವಣೆಯಲ್ಲಿ ಇನ್ನೂ ಹೆಚ್ಚು ಸ್ಥಾನಗಳು ಖಂಡಿತ ಲಭಿಸುತ್ತಿತ್ತು, ಸರ್ಕಾರ ಎಲ್ಲಾ ಜಾತಿ ಬಡವರಿಗಾಗಿ ಕೆಲಸ ಮಾಡುತ್ತಿದೆ ಎಂದರು.
3 ಫೇಸ್ ನಿರಂತರ ವಿದ್ಯುತ್: ಗ್ರಾಮೀಣ ಭಾಗದಲ್ಲಿ 3 ಫೇಸ್ ಕನಿಷ್ಠ 10 ಗಂಟೆ ನಿರಂತರವಾಗಿ ವಿದ್ಯುತ್ ನೀಡಬೇಕೆಂಬುದು ನಮ್ಮ ನಿರೀಕ್ಷೆ. ಅದರಂತೆ ಕೆಲಸ ಮಾಡುತ್ತೇವೆ. ರಾಜ್ಯದಲ್ಲಿ ಅಲಿಕಲ್ಲು ಮಳೆ ಬಿದ್ದು
ಬೆಳೆ ನಾಶವಾಗಿರುವುದರ ಬಗ್ಗೆ, ಅಡಕೆ ರೋಗದಿಂದ ನಾಶವಾಗಿರುವ ಬಗ್ಗೆ ಪರಿಹಾರ, ಕಬ್ಬು ಬೆಳೆಗಾರರಿಗೆ ನೀಡುವ ಪರಿಹಾರ ಇತ್ಯಾದಿಗಳು ಅಭಿವೃದ್ಧಿ ಕೆಲಸ ಜನರನ್ನು ತಲುಪಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಸ್.ಆರ್. ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಚ್.ಯು. ಫಾರೂಕ್, ಪುರಸಭಾ ಸದಸ್ಯ ಟಿ. ಎಸ್. ಧರ್ಮರಾಜ್,
ಪ್ರಕಾಶ್ ವರ್ಮ, ಟಿ.ಜಿ. ಆಶೋಕ್ ಕುಮಾರ್, ಮೋಹನಕುಮಾರ್, ಟಿ.ಎನ್.ಶಿವಕಿರಣ್, ದಾವೂದ್ ಪಾಷ, ಇದಿನಬ್ಬ, ಮೊಹಮ್ಮದ್ ರಫೀಕ್ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಮೀವುಲ್ಲಾ ಷರೀಫ್ ಅವರು ಮಾಜಿ ಕೇಂದ್ರ ಸಚಿವ ಇಬ್ರಾಹಿಂ ಅವರನ್ನು ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement