ಗೊಂದಲ ನಿವಾರಣೆಗೆ ಮನವಿ
ಕಡೂರು: ಚತುಷ್ಪಥ ರಸ್ತೆ ನಿರ್ಮಾಣಕ್ಕೆ ರಾ.ಹೆ. ವಿಭಾಗ ಮುಂದಾಗಿರುವುದರಿಂದ ಭದ್ರಾ ಕುಡಿಯುವ ನೀರಿನ ವಿಷಯದಲ್ಲಿ ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲ ನಿವಾರಿಸಲು ಕೂಡಲೇ ವಿಭಾಗ ಜಿಲ್ಲಾಧಿಕಾರಿಗಳು, ಸ್ಥಳೀಯ ಶಾಸಕರು ಮತ್ತು ಜನಪ್ರತಿನಿಧಿಗಳ ಸಭೆ ಕರೆಯಬೇಕು ಎಂದು ಕಡೂರು ಪುರಸಭೆ ಆಗ್ರಹಿಸಿದೆ. ಈ ಕುರಿತು ಪುರಸಭೆಯಯಲ್ಲಿ ಅಧ್ಯಕ್ಷೆ ಸರಸ್ವತಿ ಕೃಷ್ಣಮೂರ್ತಿ, ಉಪಾಧ್ಯಕ್ಷ ಜಯಣ್ಣ ಮತ್ತು ಸದಸ್ಯರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ಬಗ್ಗೆ ನಿಲಕ್ಷ್ಯ ವಹಿಸಿದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ಕಡೂರು ಪುರಸಭಾ ಸದಸ್ಯರನ್ನು ಒಳಗೊಂಡ ನಿಯೋಗ ತೆರಳಲಾಗುವುದು ಎಂದು ಎಚ್ಚರಿಸಿದ್ದಾರೆ.