ಕೆರೆಯಲ್ಲಿ ಕಾಲು ಜಾರಿ ಬಿದ್ದು ಸಾವು
ತರೀಕೆರೆ: ಸಮೀಪದ ಕೆ. ಚಟ್ಟನಹಳ್ಳಿಯ ಬಿಗ್ಗರಹಳ್ಳಿ ಕೆರೆಗೆ ವ್ಯಕ್ತಿಯೊಬ್ಬ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ. ಮನೋಜ್ಕುಮಾರ್(18) ಎಂಬಾತನೇ ಮೃತಪಟ್ಟ ದುರ್ದೈವಿ. ಮನೋಜ್ಕುಮಾರ್ ಅವರು ಪ್ರೀತಮ್ ಎಂಬವರ ಜತೆ ಎತ್ತುಗಳಿಗೆ ನೀರು ಕುಡಿಸಲು ಕೆರೆಗೆ ಹೋಗಿದ್ದಾಗ ಕಾಲು ಜಾರಿ ಬಿದ್ದು ಮನೋಜ್ಕುಮಾರ್ ಸಾವಿಗೀಡಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ