ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಗರ್ಭಗುಡಿ ಗೋಪುರ ಉದ್ಘಾಟನೆ ಇಂದು

Rashmi Kasaragodu
Updated On : 1 May 2014, 2:29 am

ಚಿಕ್ಕಮಗಳೂರು: ನಗರದ ನಾರಾಯಣಪುರ ಬಡಾವಣೆಯಲ್ಲಿನ ಶ್ರೀ ಆದಿಶಕ್ತಿ ಮಾರಿಯಮ್ಮ ದೇವಸ್ಥಾನದ ಮಹಾದ್ವಾರ ಹಾಗೂ ಗರ್ಭಗುಡಿ ಗೋಪುರಗಳ ಉದ್ಘಾಟನಾ ಕಾರ್ಯಕ್ರಮ ಮೇ. 1ರಂದು ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಅಭಿಷೇಕ, ಹೋಮ-ಹವನ, ಮೆರವಣಿಗೆ ಆಯೋಜಿಸಲಾಗಿದ್ದು, ಶುಕ್ರವಾರದಂದು ಅನ್ನಸಂತರ್ಪಣೆ ನಡೆಯಲಿದೆ ಎಂದು ಶ್ರೀ ಆದಿಶಕ್ತಿ ಮಾರಿಯಮ್ಮ ದೇವಸ್ಥಾನ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಅಡಕೆ ಕೊಳೆರೋಗ ನಿಯಂತ್ರಣ ಮಾಹಿತಿ
ಶೃಂಗೇರಿ:  ರಂಜಕಯುಕ್ತ ಶಿಲೀಂದ್ರ ನಾಶಕ ಬಯೋಪಾಟ್ ಅಡಕೆ ಕೊಳೆರೋಗ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ ಎಂದು ಡಾ. ಆರ್.ಪ್ರಕಾಶ್ ತಿಳಿಸಿದರು. ಇಲ್ಲಿನ ಮಸಿಗೆ ಕೆರೆಮನೆಯಲ್ಲಿ ರೈತ ಮಿತ್ರಕೂಟ ಸಹಯೋಗದಲ್ಲಿ ನಡೆದ ಅಡಕೆ ಕೊಳೆರೋಗ ನಿಯಂತ್ರಣ ಮಾಹಿತಿ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಳೆದ ವರ್ಷ ಅತಿವೃಷ್ಟಿಯಿಂದ ಈ ಭಾಗದ ಬಹುತೇಕ ಅಡಕೆ ತೋಟಗಳಿಗೆ ಕೊಳೆ ರೋಗ ತಗುಲಿತ್ತು.ಬಯೋಪಾಟ್ ಸಿಂಪಡಣೆಯಿಂದ ಕೊಳೆರೋಗ ತಡೆಗಟ್ಟುವಲ್ಲಿ ಯಶಸ್ವಿಯಾಗಿತ್ತು. ಮಳೆಗಾಲದ ಆರಂಭದಲ್ಲಿ ಬಯೋಪಾಟ್ ಸಿಂಪಡಣೆಯಿಂದ ರೋಗ ತಡೆಗಟ್ಟಬಹುದು. ಇದರಿಂದ ಬೆಳೆಯ ಮೇಲೆ ಯಾವುದೇ ರೀತಿಯ ಅಡ್ಡ ಪರಿಣಾಮ ಬೀರುವುದಿಲ್ಲ. ಸುಮಾರು 50 ರಿಂದ 60 ದಿನಗಳವರೆಗೆ ರೋಗ ತಡೆಗಟ್ಟಬಹುದು. ಬಹುತೇಕ ರೈತರು ಇದರ ಪ್ರಯೋಜನ ಪಡೆದಿದ್ದಾರೆ. ಕಾಳು ಮೆಣಸಿನ ಸೊರಗು ರೋಗ ತಡೆಗಟ್ಟುವಲ್ಲಿಯೂ ಯಶಸ್ವಿ ಆಗಿದೆ ಎಂದರು. ಮೆಣಸೆ ಗ್ರಾಮ ಪಂಚಾಯಿತಿಯ ಸದಸ್ಯ ಸಸಿಮನೆ ಶಿವಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾರುಕಟ್ಟೆ ವಿಭಾಗದ ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು. ಪ್ರವೀಣ್ ಸ್ವಾಗತಿಸಿ, ಭರತ್‌ರಾಜ್ ನಿರೂಪಿಸಿ, ವಸಂತ್‌ಕುಮಾರ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement