ರಕ್ತದಾನದಿಂದ ಪ್ರಾಣ ರಕ್ಷಣೆ
ಕ.ಪ್ರ.ವಾರ್ತೆ, ತರೀಕೆರೆ, ಏ.30 ರಕ್ತದಾನ ಪ್ರಾಣದಾನ ಮಾಡಿದ ಹಾಗೆ ಎಂದು ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ಶ್ರೀನಿವಾಸ ಆಚಾರ್ ತಿಳಿಸಿದ್ದಾರೆ.
ಅವರು, ಸ.ಪ್ರ.ದ. ಕಾಲೇಜು ನೈಪುಣ್ಯ ನಿಧಿ ವತಿಯಿಂದ ಕಾಲೇಜು ಆವರಣದಲ್ಲಿ ಕೌಶಲ್ಯ ಅಭಿವೃದ್ಧಿ, ರಕ್ತದಾನ ಮಹತ್ವ ಕುರಿತು ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಪಘಾತ, ಹೆರಿಗೆ ಮತ್ತು ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ರಕ್ತದ ಅವಶ್ಯಕತೆ ಹೆಚ್ಚು ಇರುತ್ತದೆ. ರಕ್ತ ಸುರಕ್ಷಿತವಾಗಿದ್ದರೆ ಮಾತ್ರ ಬೇರೆಯವರಿಗೆ ಕೊಡಬಹುದು ಹಾಗೂ ಒಂದೇ ಗುಂಪಿನ ರಕ್ತವನ್ನೂ ಸಹ ಕೊಡಬಹುದು, ರಕ್ತ ಕೊಡುವುದರಿಂದ ಶರೀರದಲ್ಲಿನ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ, ಶೇಖರಣೆಯಾದ ರಕ್ತವನ್ನು 35 ದಿನ ಮಾತ್ರ ಇಡಬಹುದು ಎಂದರು.
ಉಪನ್ಯಾಸಕ ಡಾ.ಜಗದೀಶ್ ಮಾತನಾಡಿ, ರಕ್ತ ಕೊಡುವುದರಿಂದ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ತಿಳಿಸಿದರು.
ಓಂಕಾರಮೂರ್ತಿ ಮಾತನಾಡಿ, ರಕ್ತದ ಅವಶ್ಯಕತೆ ತುಂಬಾ ಇದೆ, ಯುವ ಜನಾಂಗ ಆಸಕ್ತಿ ವಹಿಸಬೇಕು ಎಂದು ತಿಳಿಸಿದರು.
ಪ್ರಾಚಾರ್ಯ ಡಾ. ವಿಶ್ವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರು, ರೂಪ, ಪುಷ್ಪ, ತೇಜಸ್ವಿನಿ ಗೌಡ ಭಾಗವಹಿಸಿದ್ದರು.