ಹೆಬ್ಬೆ ಬಳಿ ಒಂಟಿ ಸಲಗ ಪತ್ತೆ
ನರಸಿಂಹರಾಜಪುರ: ದಟ್ಟಾರಣ್ಯದಲ್ಲಿರುವ ಹೆಬ್ಬೆ ದೇವಸ್ಥಾನದ ಪಕ್ಕದಲ್ಲಿ ಒಂದೇ ದಂತ ಹೊಂದಿರುವ ಒಂಟಿ ಕಾಡಾನೆಯೊಂದು ಕಳೆದ 4 ದಿನದಿಂದ ಸುತ್ತಾಡುತ್ತಿದೆ.
ಭದ್ರಾ ಹಿನ್ನೀರಿನ ಪಕ್ಕದ ಭದ್ರಾ ಅಭಯಾರಣ್ಯದಲ್ಲಿ ಭವಾನಿ ಶಂಕರೇಶ್ವರ ಸ್ವಾಮಿಯ ದೇವಾಲಯವಿದೆ. ಕಳೆದ ಶನಿವಾರ ಇಲ್ಲಿ ರಥೋತ್ಸವ ನಡೆದಿದೆ. ಸೋಮವಾರ ರುದ್ರಹೋಮ ನಡೆದಿದ್ದು, ಆ ಸಮಯಲ್ಲಿ ಒಂಟಿ ಆನೆ ಸುತ್ತಾಡುತ್ತಿರುವುದು ಅರ್ಚಕ ಚಂದ್ರಶೇಖರ ಐತಾಳ್ ಗಮನಕ್ಕೆ ಬಂದಿದೆ. ಈ ಸಂದರ್ಭ ಅರ್ಚಕರ ಜೊತೆಯಲ್ಲಿ ಹೆಬ್ಬೆಯ ದೇವಸ್ಥಾನಕ್ಕೆ ಬಂದಿದ್ದ ಯುವಕ ನರಸಿಂಹರಾಜಪುರದ ಎನ್.ನವೀನ್ ಕ್ಯಾಮರಾದಲ್ಲಿ ಪೋಟೋ ತೆಗೆದಿರುವುದು ಇಲ್ಲಿ ಒಂಟಿ ದಂತದ ಆನೆಯ ಸುತ್ತಾಡುತ್ತಿರುವುದು ದೃಢಪಟ್ಟಂತಾಗಿದೆ.