ಗಾಯಿತ್ರಿ ಪ್ರತಿಷ್ಠಾನದಿಂದ ಪೋಸ್ಟ್‌ಮಾಸ್ಟರ್ ಗುಂಡಣ್ಣ ಸನ್ಮಾನ
ತರೀಕೆರೆ: ಪ್ರಧಾನ ಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ಗುಂಡಣ್ಣ ಅವರಿಗೆ ಇನ್ನೂ ಹೆಚ್ಚಿನ ಉನ್ನತ ಸ್ಥಾನ ದೊರಕಲಿ ಎಂದು ಮಾತಾ ಗಾಯಿತ್ರಿ ಪ್ರತಿಷ್ಠಾನದ ಗೌರವಾಧ್ಯಕ್ಷ ವೇ.ಬ್ರ.ಶ್ರೀ ಕೆ.ಟಿ.ಲಕ್ಷ್ಮೀನಾರಾಯಣ ಭಟ್ ಹೇಳಿದರು.
ಇಲ್ಲನ ಮಾತಾ ಗಾಯಿತ್ರಿ ಪ್ರತಿಷ್ಠಾನದಿಂದ ಶುಕ್ರವಾರ ಶೃಂಗೇರಿ ಶಾರದ ಸಭಾ ಭವನದಲ್ಲಿ ಪೋಸ್ಟ್ ಮಾಸ್ಟರ್ ಗುಂಡಣ್ಣ ಅವರಿಗೆ ವರ್ಗಾವಣೆಯಾದ ಹಿನ್ನೆಲೆ ಏರ್ಪಾಡಾಗಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಗುಂಡಣ್ಣ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಸರ್ಕಾರದಿಂದ ಗುಂಡಣ್ಣ ಅವರಿಗೆ ಉನ್ನತ ಸ್ಥಾನ ಪುರಸ್ಕಾರಗಳು ದೊರೆಯಲಿ ಎಂದರು.
ಪ್ರತಿಷ್ಠಾನದ ಅಧ್ಯಕ್ಷ, ಕನ್ನಡಶ್ರೀ ಬಿ.ಎಸ್.ಭಗವಾನ್, ಶಾರದಾ ಸಭಾ ಭವನದ ಧರ್ಮಾಧಿಕಾರಿ ಆರ್.ಕೃಷ್ಣಮೂರ್ತಿ ಮಾತನಾಡಿದರು. ಪ್ರತಿಷ್ಠಾನದ ವತಿಯಿಂದ ಪೋಸ್ಟ್‌ಮಾಸ್ಟರ್ ಗುಂಡಣ್ಣ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಅಧ್ಯಕ್ಷ ಜಿ.ಸುಬ್ರಹ್ಮಣ್ಯ, ಹಿರಿಯ ಕಲಾವಿದ ಎಲ್.ಎಸ್.ಲಿಂಗಪ್ಪಯ್ಯ, ಅನ್ನಪೂರ್ಣ ಕೃಷ್ಣಮೂರ್ತಿ ಭಾಗವಹಿಸಿದ್ದರು.