ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪೂರ್ವಿಕರ ಪದ್ಧತಿ ಹಿಂದೆ ಮನಸ್ಸು, ಆರೋಗ್ಯದ ಹಿತ

Mainashree
Updated On : 4 Aug 2014, 10:18 am

ತರೀಕೆರೆ: ಪೂರ್ವಜರು ಆಚರಣೆಗೆ ತಂದ ಪ್ರತಿ ಪದ್ಧತಿ ಹಿಂದೆ ಮನಸ್ಸು ಮತ್ತು ದೇಹದ ಆರೋಗ್ಯದ ಹಿತ ಅಡಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಅಧ್ಯಕ್ಷ ಜಿ.ಸುಬ್ರಹ್ಮಣ್ಯ ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಏರ್ಪಾಡಾಗಿದ್ದ ಜ್ಞಾನವಿಕಾಸ ಕೇಂದ್ರದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಗುವಿನ ಬೆಳವಣಿಗೆಯಲ್ಲಿ ತಾಯಿ ಜವಾಬ್ದಾರಿ ಹೆಚ್ಚಿನದು. ನಮ್ಮ ಪೂರ್ವಜರು ಆಚರಣೆಗೆ ತಂದಿರುವ ಆಚಾರ-ವಿಚಾರ, ಸಂಪ್ರದಾಯ, ನಂಬಿಕೆ ಮತ್ತು ನಡವಳಿಕೆಗಳ ಹಿಂದೆ ವೈಜ್ಞಾನಿಕ ಸಂಗತಿ ಅಡಗಿದೆ. ಪ್ರತಿ ಪದ್ಧತಿ ಹಿಂದೆ ಮನಸ್ಸು ಮತ್ತು ದೇಹದ ಆರೋಗ್ಯದ ಹಿತ ಅಡಗಿದೆ ಎಂದು ಅವರು ತಿಳಿಸಿದರು.
ಮನೆಯ ಮುಂದೆ ಬೆಳೆಸುವ ತುಳಸಿ, ರಂಗೋಲಿ ಹಾಕುವುದು, ಉಪವಾಸ, ಪೂಜೆ, ದೇವಸ್ಥಾನದಲ್ಲಿ ಪುರೋಹಿತರು ಮಾಡುವ ಮಡಿಯ ಹಿಂದಿನ ಉದ್ದೇಶ, ರಾತ್ರಿ ಸಮಯದಲ್ಲಿ ಹಸಿರು ಗಿಡ ಮುಟ್ಟಬಾರದೆಂಬುದು ಇವುಗಳ ಕುರಿತು ವೈಜ್ಞಾನಿಕ ಹಿನ್ನೆಲೆ ತಿಳಿಸಿದರು.
ಜ್ಞಾನವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಮಲ್ಲಮ್ಮ ಮಾತನಾಡಿ ಮಹಿಳೆಯ ಸರ್ವತೋಮುಖ ಅಭಿವೃದ್ಧಿಗಾಗಿ ಹಮ್ಮಿಕೊಂಡಂತಹ ಜ್ಞಾನವಿಕಾಸ ಕೇಂದ್ರದ ಕಾರ್ಯಕ್ರಮ ಅತ್ಯಂತ ಜನಪ್ರಿಯವಾಗಿದೆ. ಮಹಿಳೆಗೆ ಸ್ವ ಉದ್ಯೋಗ, ಶಿಕ್ಷಣ ಕಾನೂನು ಅರಿವು, ಸರ್ಕಾರಿ ಸೌಲಭ್ಯಗಳು, ಕುಟುಂಬ ನಿರ್ವಹಣೆ ಕುರಿತು ಸಂಪೂರ್ಣ ಮಾಹಿತಿ ಮತ್ತು ಮನೋರಂಜನೆ ಕೂಡ ದೊರೆಯುತ್ತದೆ ಎಂದು ತಿಳಿಸಿದರು.
ಪುರಸಭೆ ಅಧ್ಯಕ್ಷೆ ಪುಟ್ಟಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಲಯ ಮೇಲ್ವಿಚಾರಕ ಅನಿಲ್‌ಕುಮಾರ್, ಒಕ್ಕೂಟದ ಅಧ್ಯಕ್ಷೆ ಲತಾ, ಸೇವಾ ಪ್ರತಿನಿಧಿ ರಾಧಾ, ಚಂದ್ರಶೇಖರ್, ಕವಿತ ಮತ್ತಿತರರು ಉಪಸ್ಥಿತರಿದ್ದರು. ಉಷ ಸ್ವಾಗತಿಸಿದರು. ಮಾಲಾ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement