ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪ್ರಕೃತಿ ಚಿಕಿತ್ಸೆಯಿಂದ ಶಾಶ್ವತ ಪರಿಹಾರ ಸಾಧ್ಯ

Mainashree
Updated On : 4 Aug 2014, 10:19 am

ಚಿಕ್ಕಮಗಳೂರು: ಆರೋಗ್ಯವಂತ ದೇಹಕ್ಕೆ ವ್ಯಾಯಾಮ, ಮನಸ್ಸಿಗೆ ಧ್ಯಾನ, ಬದುಕಲು ಜಲ ಚಿಕಿತ್ಸೆ ಪೂರಕ ಎಂದು ಅಕ್ಯೂಪ್ರೆಷರ್ ಚಿಕಿತ್ಸಕ  ಮೈಸೂರಿನ ಡಾ. ವಿಜಯಕುಮಾರ್ ತಿಳಿಸಿದರು.
ಜಿಲ್ಲಾ ಭಾರತ ಸೇವಾದಳ ನೇತೃತ್ವದಲ್ಲಿ ಜಿಲ್ಲಾ ಆಟದ ಮೈದಾನ ಆವರಣದಲ್ಲಿ ಆಯೋಜಿಸಿರುವ 40 ದಿನಗಳ ಅಕ್ಯೂಪ್ರೆಷರ್ ಹಾಗೂ ಸುಜೋಕ್ ಚಿಕಿತ್ಸಾ ಶಿಬಿರದ ಅಂಗವಾಗಿ ಭಾನುವಾರ ಸಾರ್ವಜನಿಕರಿಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶರೀರ ಒಂದು ಯಂತ್ರಗಾರ. ಅಗತ್ಯವಿರುವ ಕಸರತ್ತನ್ನು ಕೊಡಬೇಕು. ಸೇವಿಸುವ ಆಹಾರ ಜೀರ್ಣಶಕ್ತಿ ಕೊಟ್ಟರೆ ಶರೀರದ ಅಂಗಾಂಗಗಳು ಆಹ್ಲಾದಕರವಾಗಿ ಕೆಲಸ ಮಾಡುತ್ತವೆ. ಒತ್ತಡ ಶರೀರದಲ್ಲಿ ಹೆಚ್ಚಾಗಿ ಮಧುಮೇಹ, ರಕ್ತಒತ್ತಡ ಸೇರಿದಂತೆ ಹಲವು ಕಾಯಿಲೆಗಳ ಅವಾಸ ಸ್ಥಾನವಾಗುತ್ತದೆ. ಜೊತೆಗೆ ಅಂಗಾಂಗಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದರು.
ಭಾರತ ಸೇವಾದಳ ರಾಜ್ಯ ಉಪಾಧ್ಯಕ್ಷ, ಮಾಜಿ ಶಾಸಕ ಐ.ಬಿ. ಶಂಕರ್ ಅಧ್ಯಕ್ಷತೆ ವಹಿಸಿದ್ದು, ನಾವಿಂದು ಹಣ ಕೊಟ್ಟು ಕಾಯಿಲೆ ತಂದು ಕೊಳ್ಳುತ್ತಿದ್ದೇವೆ. ಕ್ರಿಮಿನಾಶಕ, ರಾಸಾಯನಿಕಯುಕ್ತ ತರಕಾರಿ, ಸೊಪ್ಪು, ಧಾನ್ಯ ಬಳಸಿ ಕಲಬೆರೆಕೆ ಆಹಾರ ಸೇವಿಸಿ ಅನೇಕ ಕಾಯಿಲೆಗಳಿಗೆ ಅವಕಾಶ ಮಾಡಿಕೊಡುತ್ತಿದ್ದೇವೆ. ಪ್ರಕೃತಿ ಚಿಕಿತ್ಸೆ ಮನೆಮದ್ದಿನ ಮೂಲಕ ತಾಳ್ಮೆಯಿಂದ ನಿರಂತರವಾಗಿ ಚಿಕಿತ್ಸೆಗೆ ಒಳಗಾದರೆ ಅಡ್ಡ ಪರಿಣಾಮವಿಲ್ಲದೆ ಗುಣಮುಖರಾಗಬಹುದೆಂದು ತಿಳಿಸಿದರು.
ವಕೀಲ ಬಿ.ಆರ್. ಜಗದೀಶ್ ಮಾತನಾಡಿ, ಒತ್ತಡದ ಬದುಕಿನಲ್ಲಿ ರೋಗ ನೋವುಗಳು ಸಹಜ.  ಔಷಧಿ, ಮಾತ್ರೆ, ಶಸ್ತ್ರಚಿಕಿತ್ಸೆ ಇಲ್ಲದೆ ಸರಳವಾಗಿ ಅಕ್ಯೂಪ್ರೆಷರ್ ಹಾಗೂ ಸುಜೋಕ್ ಚಿಕಿತ್ಸೆಯಿಂದ ಉತ್ತಮ ಆರೋಗ್ಯ ಹೊಂದಬಹುದೆಂದರು.
ವರ್ತಕರ ಸಂಘದ ಮಾಜಿ ಅಧ್ಯಕ್ಷ ರವಿಶಂಕರ್, ಪತ್ರಕರ್ತ ಪ್ರಭುಲಿಂಗಶಾಸ್ತ್ರಿ ಮಾತನಾಡಿದರು. ಭಾರತ ಸೇವಾ ದಳ ಮೈಸೂರು ವಿಭಾಗೀಯ ಸಂಘಟನಾ ಕಾರ್ಯದರ್ಶಿ ರವಿಶಂಕರ್ ಸ್ವಾಗತಿಸಿದರು. ಸಹಾಯಕ ಚಿಕಿತ್ಸಕ ನಟರಾಜ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement