ಅವ್ಯವಸ್ಥೆ ಆಗರವಾದ ಮೂಡಿಗೆರೆ ಆಸ್ಪತ್ರೆ
ಮೂಡಿಗೆರೆ: ಮೂಡಿಗೆರೆ ಮಹಾತ್ಮ ಗಾಂಧಿ ಸ್ಮಾರಕ 100 ಹಾಸಿಗೆಗಳ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ.
ಕೆಲವು ವರ್ಷಗಳಿಂದ ಖಾಲಿ ಇದ್ದ 15 ವೈದ್ಯರ ಹುದ್ದೆಗಳಲ್ಲಿ 3 ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದು, ಕಳೆದ 1 ತಿಂಗಳಿನಿಂದ 4 ಹೊಸ ವೈದ್ಯರು ಆಗಮಿಸಿದ್ದು, 7 ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಆಸ್ಪತ್ರೆ ಸೋರುತ್ತಿದ್ದು, ಕುಸಿಯುವ ಹಂತ ತಲುಪಿದ್ದರೂ ಜನಪ್ರತಿನಿಧಿಗಳು ಗಮನಹರಿಸಿಲ್ಲ ಎಂದು ಕರವೇ ಘಟಕದ ಗೌರವಾಧ್ಯಕ್ಷ ಹೊರಟ್ಟಿ ರಘು ಆರೋಪಿಸಿದ್ದಾರೆ.
ಮೂಡಿಗೆರೆಗೆ ಆಸ್ಪತ್ರೆಗೆ ಮುಖ್ಯವಾಗಿ ಬೇಕಾಗಿರುವ ಸರ್ಜನ್, ಫಿಜಿಷಿಯನ್ ಮತ್ತು ಗೈನೋಕಾಲಿಜಿಸ್ಟ್ ಇಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ಕಟ್ಟಡ ಸೋರುತ್ತಿದ್ದು, ಯಾವ ಕ್ಷಣದಲ್ಲಾದರೂ ಕುಸಿಯುವ ಸಾಧ್ಯತೆಗಳಿವೆ.
ಜನರೇಟರ್ ಕಾರ್ಯನಿರ್ವಹಿಸುತ್ತಿಲ್ಲ. ಕುಡಿಯುವ ನೀರಿಲ್ಲದೆ ರೋಗಿಗಳು ಪರದಾಡುವಂತಾಗಿದೆ