ತೀರ್ಥಂಕರರ ವಿಗ್ರಹ ಕಳವು
ಮೂಡಿಗೆರೆ: ಹೊಯ್ಸಳರ ಮೂಲ ಸ್ಥಳವಾದ ತಾಲೂಕಿನ ಅಂಗಡಿ (ಶಶಕಪುರ)ಗ್ರಾಮದ ಜೈನ ಬಸದಿಯಲ್ಲಿದ್ದ ತೀರ್ಥಂಕರರ ವಿಗ್ರಹಗಳು ಕಳುವಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಜೈನ ಬಸದಿ ಪುರಾತನವಾಗಿದ್ದು, ಜೀರ್ಣೋದ್ಧಾರ ನಡೆಯುತ್ತಿದೆ. 22, 23, 24ನೇ ತೀರ್ಥಂಕರರ 900 ವರ್ಷಗಳ ಹಿಂದಿನ ವಿಗ್ರಹಗಳಾದ ಮಲ್ಲಿನಾಥ ಸ್ವಾಮಿ, ಪಾರ್ಶ್ವನಾಥ ಸ್ವಾಮಿ ಮತ್ತು ಮುನ್ಶಿನಾಥ ಸ್ವಾಮಿಗಳ ವಿಗ್ರಹಗಳು ಹಾಗೂ ಮತ್ತೊಂದು ಬಸದಿಯಲ್ಲಿದ್ದ ನೇಮಿನಾಥ ಸ್ವಾಮಿಯ ವಿಗ್ರಹಗಳನ್ನು ಕಳವು ಮಾಡಲಾಗಿದೆ.