ಕರವೇ ಪದಾಧಿಕಾರಿಗಳ ಆಯ್ಕೆ
ತರೀಕೆರೆ: ಇಲ್ಲಿನ ಕರವೇ ತಾಲೂಕು ಘಟಕದ ಅಧ್ಯಕ್ಷರಾಗಿ ಟಿ.ಕೆ.ಗಜೇಂದ್ರ, ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ನವೀನ್ ಎ. ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಮೋಕ್ಷಕುಮಾರ್ ಎ.ಆರ್., ಉಪಾಧ್ಯಕ್ಷರಾಗಿ ಭರತ್ ಟಿ.ಆರ್., ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ಅಭಿಜಿತ್ ಟಿ.ವಿ., ಇಟ್ಟಿಗೆ ಹೋಬಳಿ ಘಟಕದ ಅಧ್ಯಕ್ಷರಾಗಿ ದರ್ಶನ್ ಇ.ಸಿ., ಎರಹಳ್ಳಿ ತಾಂಡ್ಯದ ಅಧ್ಯಕ್ಷರಾಗಿ ಶ್ರೀನಿವಾಸ್, ಉಪಾಧ್ಯಕ್ಷರಾಗಿ ಈಶ್ವರ್ ಅವರನ್ನು ಜಿಲ್ಲಾಧ್ಯಕ್ಷ ವಿಶ್ವನಾಥ್ ಆಯ್ಕೆ ಮಾಡಿದರು. ತಸತ್ಯನಾರಾಯಣ್, ಪುರಸಭೆ ಮಾಜಿ ಸದಸ್ಯರು, ಮುಖಂಡರಾದ ಪ್ರಕಾಶ್, ಸದಸ್ಯರಾದ ನವೀನ್, ಶ್ರೀಧರ್ ರಾಕೇಶ್ ಸುನೀಲ್, ಸಂತೋಷ್, ಉಲ್ಲಾಸ್ ಸಿ. ಭಾಗವಹಿಸಿದ್ದರು.