ಶ್ರೀ ಶನೇಶ್ಚರಸ್ವಾಮಿ ವಾರ್ಷಿಕೋತ್ಸವ
ಚಿಕ್ಕಮಗಳೂರು: ನಗರದ ಗೌರಿ ಕಾಲುವೆಯ ಶ್ರೀ ಶನೇಶ್ಚರಸ್ವಾಮಿಯ 17ನೇ ವಾರ್ಷಿಕ ಮಹೋತ್ಸವವು ಫೆ.6ರಿಂದ 8ರ ವರೆಗೆ ನಡೆಯಲಿದೆ. ಫೆ.6ರಂದು ಮಧ್ಯಾಹ್ನ 2 ಗಂಟೆಗೆ ಸ್ವಾಮಿಯ ಉತ್ಸವ ಮೂರ್ತಿ ಮೆರವಣಿಗೆ ನಡೆಯಲಿದೆ. ಫೆ.7ರಂದು ವಾರ್ಷಿಕೋತ್ಸವ ಸಂದರ್ಭದಲ್ಲಿ ನಡೆಯುವ ಪೂಜಾ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳಿಗೆ ಅಕ್ಕಿ ಬೇಳೆ, ಹಾಲು, ತೆಂಗಿನಕಾಯಿ ಕೊಡಲಿಚ್ಚಿಸುವವರು ತಂದೊಪ್ಪಿಸಬಹುದಾಗಿದೆ. ಫೆ.8ರಂದು ಬೆಳಗ್ಗೆ 5.30ಕ್ಕೆ ಧ್ವಜಾರೋಹಣ, ಗಂಗಾಪೂಜೆ, 6.15ಕ್ಕೆ ಶತಕಲಾಭಿಷೇಕ, 8 ಗಂಟೆಗೆ ಹೋಮ, 11 ಗಂಟೆಗೆ ಪೂರ್ಣಾಹುತಿ ಮತ್ತು ಮಧ್ಯಾಹ್ನ 12.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣಾ ಕಾರ್ಯಕ್ರಮ ಜರುಗಲಿದೆ. ಅದೇ ದಿನ ಸಂಜೆ 6.30ಕ್ಕೆ ಶ್ರೀ ಮೂಕಾಂಬಿಕ ನೃತ್ಯ ಕಲಾ ಶಾಲೆ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದು ದೇವಾಲಯ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.
8ರಿಂದ ಕ್ರಿಕೆಟ್ ಪಂದ್ಯಾವಳಿ
ಚಿಕ್ಕಮಗಳೂರು ತಾಲೂಕಿನ ತೊಂಡವಳ್ಳಿ ಶ್ರೀ ಶನೇಶ್ಚರ ಕ್ರಿಕೆಟರ್ಸ್ ಫೆ.8 ಮತ್ತು 9ರಂದು ತೊಂಡವಳ್ಳಿ ಸಮೀಪದ ಕ್ರಿಡಾಂಗಣದಲ್ಲಿ ಜಿಲ್ಲಾ ಮಟ್ಟದ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಿದೆ.
ಪ್ರಥಮ ಬಹುಮಾನ ಆಕರ್ಷಕ ಟ್ರೋಫಿಯೊಂದಿಗೆ 10,200 ನಗದು, ದ್ವಿತೀಯ ಬಹುಮಾನ ಟ್ರೋಫಿಯೊಂದಿಗೆ 5100 ನಗದು ನೀಡಲಾಗುವುದು. ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳು ತಮ್ಮ ತಂಡದ ಹೆಸರನ್ನು ದಿನೇಶ್ (9483400287), ಪರಮೇಶ್ (9449036887) ಅವರನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು.
ನಾಗರಾಜ್ ಆಯ್ಕೆ
ಭದ್ರಾವತಿ: ತಾಲೂಕು ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷರನ್ನಾಗಿ ಪಟ್ಟಣದ ಬಿ.ಆರ್.ನಾಗರಾಜ್ ಅವರನ್ನು ಜಿಲ್ಲಾಧ್ಯಕ್ಷ ಕೆ. ದೇವೇಂದ್ರಪ್ಪ ನೇಮಿಸಿ ಆದೇಶ ಹೊರಡಿಸಿದ್ದಾರೆ. ಭದ್ರಾವತಿಯ ಕಾರ್ಮಿಕರು, ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಹಮಾಲಿ ಕಾರ್ಮಿಕರು, ರೈತ ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಕಾರ್ಮಿಕ ವಿಭಾಗಕ್ಕೆ ಸೇರಿದ ಸರ್ಕಾರಿ ಸವಲತ್ತುಗಳನ್ನು ಪಡೆಯಲು ನಾಗರಾಜ್ ಅವರನ್ನು ಸಂಪರ್ಕಿಸಬೇಕಾಗಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗ ಕೋರಿದೆ.
ರಥೋತ್ಸವ
ತೀರ್ಥಹಳ್ಳಿ: ಪಟ್ಟಣದ ಶ್ರೀಕಲ್ಲಾರೆ ವಿನಾಯಕ ದೇವರ ರಥೋತ್ಸವ ಸೋಮವಾರ ಬೆಳಗ್ಗೆ ವೈಭವದಿಂದ ನೆರವೇರಿತು. ಸಹಸ್ರಾವರ್ತನ ಶೀರ್ಷಾಭಿಷೇಕ, ಚತುರ್ದ್ರವ್ಯ ಅಥರ್ವಶೀರ್ಷ ಗಣಹೋಮ ವಿಧಿವತ್ತಾಗಿ ನೆರವೇರಿಸಲಾಯಿತು.