ಅಡಕೆ: 10ರಂದು ಬಂದ್ಆಚರಣೆ
ಶೃಂಗೇರಿ: ಮಲೆನಾಡು ಭಾಗದಲ್ಲಿ ಅಡಕೆ ಬೆಳೆಗಾರರ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಫೆ.10ರಂದು ಕ್ಷೇತ್ರ ವ್ಯಾಪಿ ಬಂದ್ ನಡೆಸಲು ತೀರ್ಮಾನಿಸಲಾಗಿದೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸರ್ವಪಕ್ಷ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಬೆಳಗ್ಗೆ 6 ಗಂಟೆಯಿಂದ ಸಂಂಜೆ 6 ಗಂಟೆವರೆಗೆ ಬಂದ್ ನಡೆಯಲಿದೆ. ಪ್ರತಿಭಟನಾ ಮೆರವಣಿಗೆ, ಸಭೆ ನಡೆಯಲಿದೆ. ಗೋರಕ್ ಸಿಂಗ್ ವರದಿ ಅನುಷ್ಠಾನ, ರೈತರ ಸಾಲ ಮನ್ನಾ, ಹಳದಿ ಎಲೆ ಪರಿಹಾರ ಪ್ಯಾಕೇಜ್ ಜಾರಿಗೊಳಿಸುವಲ್ಲಿ ರಾಜ್ಯ, ಕೇಂದ್ರ ಸರ್ಕಾರಗಳು ಸಂಪೂರ್ಣ ವಿಫಲಗೊಂಡಿವೆ. ರೈತರ ಹೋರಾಟಗಳಿಗೆ ಸ್ಪಂದಿಸದ ಬಗ್ಗೆಯೂ ಚರ್ಚೆ ನಡೆಸಲಾಯಿತು. ವಾಹನ ಚಾಲಕರು, ಮಾಲಿಕರ ಸಂಘ, ವರ್ತಕರು ಸೇರಿದಂತೆ ಎಲ್ಲರೂ ಬಂದ್ ಬೆಂಬಲಿಸುವಂತೆ ಮನವಿ ಮಾಡಲಾಯಿತು.
ಸಭೆಯಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಟಿ. ರಾಜೇಂದ್ರ, ಕಾಂಗ್ರೆಸ್ನ ಟಿ.ಡಿ. ರಾಜೇಗೌಡ, ಬಿಜೆಪಿಯ ಎಚ್.ಎಸ್. ನಟೇಶ್, ಬಿ.ಶಿವಶಂಕರ್, ಪುಷ್ಪಲಕ್ಷ್ಮಿ ನಾರಾಯಣ್, ಗೋಪಾಲ್, ಜಿ.ಎಂ. ಸುರೇಂದ್ರ, ರೈತ ಸಂಘದ ಟಿ.ಕೆ. ಗೋಪಾಲ ನಾಯಕ್ ಉಪಸ್ಥಿತರಿದ್ದರು.