ಬಾವಿಕೆರೆ ಕೇಂಬ್ರಿಡ್ಜ್ ಶಾಲೆ ವಾರ್ಷಿಕೋತ್ಸವ
ಕ.ಪ್ರ.ವಾರ್ತೆ, ತರೀಕೆರೆ, ಫೆ. 5
ಇಲ್ಲಿಗೆ ಸಮೀಪದ ಬಾವಿಕೆರೆಯ ಕೇಂಬ್ರಿಡ್ಜ್ ಶಾಲೆ ವಾರ್ಷಿಕೋತ್ಸವ ಏರ್ಪಡಿಸಲಾಗಿತ್ತು.
ಗುತ್ತಿಗೆದಾರ ಚಂದ್ರಶೇಖರ್ ಮಾತನಾಡಿ, ಭವಿಷ್ಯದಲ್ಲಿ ಮಕ್ಕಳನ್ನು ಎಂಜಿನಿಯರ್ ಅಥವಾ ವೈದ್ಯರನ್ನಾಗಿ ಮಾಡುವ ಉದ್ದೇಶಗಳಿಗೆ ಕಟ್ಟುಬೀಳದೆ ಇತರ ಕ್ಷೇತ್ರಗಳತ್ತ ಪೋಷಕರು ಮಕ್ಕಳಿಗೆ ತಿಳಿಹೇಳಬೇಕಾದ ಅನಿವಾರ್ಯತೆ ಇದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಅವಕಾಶಗಳು ವಿಫುಲವಾಗಿದೆ ಎಂದು ತಿಳಿಸಿದರು.
ತರೀಕೆರೆ ಬಾಲಿಕಾ ಪ.ಪೂ. ಕಾಲೇಜಿನ ಉಪನ್ಯಾಸಕ ರುದ್ರೇಶ್ ಮಾತನಾಡಿ, ಒಂದು ಶಾಲೆ ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳ ಸಹಕಾರ ಅಗತ್ಯ. ಶಾಲೆಯ ಆಧಾರ ಸ್ತಂಭಗಳಿದ್ದಂತೆ. ಶಾಲೆಯ ವಾತಾವರಣ ಚೆನ್ನಾಗಿದ್ದರೆ ಉತ್ತಮ ವಿದ್ಯಾರ್ಥಿಗಳನ್ನು ಉನ್ನತ ಸ್ಥಾನಗಳಿಗೆ ಕಳಿಸಲು ಸಾಧ್ಯವಾಗುತ್ತದೆ ಎಂದರು.
ಸಂಸ್ಥೆ ನಿರ್ದೇಶಕ ಟಿ.ಆರ್. ಪ್ರಭಾಕರ್ ಮಾತನಾಡಿ, ಪೋಷಕರು ಕೇವಲ ದುಡಿಮೆಯ ಕಡೆಗೆ ಒಲವು ತೋರದೆ, ವಿದ್ಯಾರ್ಥಿಗಳ ಆಗುಹೋಗುಗಳ ಕಡೆಗೆ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನ ನೀಡಬೇಕು ಎಂದು ತಿಳಿಸಿದರು.
ಶಿಕ್ಷಕಿ ಲೀಲಾ ದಯಾನಂದ್, ಚಂದ್ರಮೌಳಿ, ಜಗದೀಶ್, ವಸಂತ್ಕುಮಾರ್, ಮಂಜುನಾಥ್, ಗ್ರಾ.ಪಂ.ಅಧ್ಯಕ್ಷರು, ವಿದ್ಯಾರ್ಥಿಗಳು, ಪೋಷಕರು ಇದ್ದರು.
--