ವಾಕಿಂಗ್ ಹೋಗುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ: ಸಾವು
ನರಸಿಂಹರಾಜಪುರ: ಪಟ್ಟಣದ ಬಸ್ತಿಮಠದ ಸಮೀಪದ ಮುಖ್ಯರಸ್ತೆಯಲ್ಲಿ ಬುಧವಾರ ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದ ವೆಂಕಟೇಶ್ (45) ಎಂಬುವರಿಗೆ ಮಾರುತಿ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿರುವ ಘಟನೆ ನಡೆದಿದೆ.
ಬುಧವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಪಟ್ಟಣದ ಲಕ್ಷ್ಮೀ ಕಾಂತ್ ಬಾರ್ ಮಾಲೀಕ ವೆಂಕಟೇಶ್ ಬಸ್ತಿಮಠದ ಸಮೀಪ ಮುಖ್ಯರಸ್ತೆಯ ಇಂದ್ರಭವನ ಹೋಟೆಲ್ ಸಮೀಪ ಹೋಗುತ್ತಿರುವಾಗ ಎದುರಿನಿಂದ ಬಂದ ಮಾರುತಿ ವ್ಯಾನ್ ಡಿಕ್ಕಿ ಹೊಡೆದು ನಂತರ ಇಂದ್ರ ಭವನದ ಕಾಂಪೌಂಡಿಗೆ ಡಿಕ್ಕಿ ಹೊಡೆದಿದೆ.
ತಲೆಗೆ ತೀವ್ರವಾಗಿ ಪೆಟ್ಟು ಬಿದ್ದ ವೆಂಕಟೇಶ್ ಅವರನ್ನು ತಕ್ಷಣ ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೂ ಪ್ರಯೋಜನವಾಗದೆ ಸ್ವಲ್ಪ ಹೊತ್ತಿನಲ್ಲೇ ಮೃತಪಟ್ಟಿದ್ದಾರೆ.
ಮೃತರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಖಾಸಗಿ ಆಸ್ಪತ್ರೆಯ ಸಿಸ್ಟರ್ ಸ್ತ್ರೈಸಿಯಾ ಎಂಬುವರು ವ್ಯಾನ್ ಚಾಲನೆ ಮಾಡುತ್ತಿದ್ದರು ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉದ್ವಿಗ್ನ ವಾತಾರವಣ: ಘಟನೆಯಿಂದ ಆಕ್ರೋಶಗೊಂಡ ಮೃತರ ಮಿತ್ರರು, ಸಾರ್ವಜನಿಕರು, ಸಂಬಂಧಿಕರು ಸಿಸ್ಚರ್ ಅವರನ್ನು ತಕ್ಷಣ ಬಂಧಿಸಬೇಕು. ಇಲ್ಲದಿದ್ದರೆ ಮೃತದೇಹವನ್ನು ಇಲ್ಲಿಂದ ಕೊಂಡೊಯ್ಯಲು ಬಿಡುವುದಿಲ್ಲ ಎಂದು ಪ್ರತಿಭಟನೆಗೆ ಮುಂದಾದರು.
ಇದರಿಂದ ಆಸ್ಪತ್ರೆ ಸಮೀಪ ಕೆಲ ಸಮಯ ಉದ್ವಿಗ್ನ ವಾತಾವರಣ ಕಂಡು ಬಂದಿತು. ನಂತರ ಸಿಸ್ಚರ್ ಅವರನ್ನು ಬಂಧಿಸುವುದಾಗಿ ಪೊಲೀಸರು ನೀಡಿದ ಭರವಸೆಯಿಂದ ಸಾರ್ವಜನಿಕರು ಪ್ರತಿಭಟನೆ ಹಿಂಪಡೆದರು. ತೀರ್ಥಹಳ್ಳಿ ಸಮೀಪದ ಹುಟ್ಟೂರಿಗೆ ಮೃತದೇಹವನ್ನು ಕೊಂಡೊಯ್ಯಲಾಯಿತು. ವಾಹನ ಚಾಲನೆ ಮಾಡುತ್ತದ್ದ ಸಿಸ್ಟರ್ ಅವರಿಗೆ ಪೆಟ್ಟಾಗಿದ್ದರಿಂದ ಶಿವಮೊಗ್ಗ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸ್ ಮುಲಗಳು ತಿಳಿಸಿವೆ.