ಗ್ರಂಥಾಲಯದಲ್ಲಿ ತೇಜಸ್ವಿ ಪುಸ್ತಕಗಳಿಲ್ಲ
ಮೂಡಿಗೆರೆ: ಕರ್ನಾಟಕದ ಜನತೆಗೆ ಮೂಡಿಗೆರೆ ಎಂದಾಕ್ಷಣ ನೆನಪಿಗೆ ಬರುವುದು ಪೂರ್ಣ್ಣಚಂದ್ರ ತೇಜಸ್ವಿ, ಅವರು ಬರೆದಂತಹ ಬಹುಪಾಲು ಕಥೆ ಮಲೆನಾಡಿನ ಹಳ್ಳಿ, ಅಲ್ಲಿಯ ಸಂಸ್ಕೃತಿ, ಸಾಮಾಜಿಕ ಚಿತ್ರಣ, ವೈಜ್ಞಾನಿಕ ವಿಶ್ಲೇಷಣೆಗಳೇ ಅಧಿಕ. ಅವರು ನೆಲಸಿದ್ದ ಊರಿನ ಗ್ರಂಥಾಲಯದಲ್ಲೇ ಅವರ ಪುಸ್ತಕಗಳು ಇಲ್ಲದೆ ಇರುವುದು ಬೇಸರದ ಸಂಗತಿಯಾಗಿದೆ ಎಂದು ಬೆಳಗುಳದ ಪುಸ್ತಕ ಪ್ರೇಮಿ ಬಿ. ಮಂಜುನಾಥ್ ವಿಷಾದ ವ್ಯಕ್ತಪಡಿಸಿದರು. ತೇಜಸ್ವಿ ಅವರ ಪುಸ್ತಕವನ್ನು ಓದಲು ಕುಳಿತರೆ ಅದು ಪೂರ್ಣಗೊಳ್ಳುವವರೆಗೂ ಏಳಲು ಸಾಧ್ಯವಿಲ್ಲ. ಅಂತಹ ಅಗಾಧ ಶಕ್ತಿಯನ್ನು ಹೊಂದಿರುವ ಸಾಹಿತಿಯ ಒಂದೇ ಒಂದು ಪುಸ್ತಕಗಳು ಮೂಡಿಗೆರೆ ಮುಖ್ಯ ಗ್ರಂಥಾಲಯದಲ್ಲಿ ಇರದೇ ಇರುವುದು ಓದುಗರು ತೇಜಸ್ವಿ ಅವರ ಪುಸ್ತಕದಿಂದ ವಂಚಿತರಾಗುತ್ತಿದ್ದಾರೆ. ಗ್ರಂಥಾಲಯದ ಎದುರಿನಲ್ಲಿರುವ ಡಾ. ಅಡ್ಯಂತಾಯ ಬಯಲು ರಂಗ ಮಂದಿರದಲ್ಲಿ ನಡೆಯುವ ಬಹುಪಾಲು ಕಾರ್ಯಕ್ರಮಗಳು ಪೂರ್ಣಚಂದ್ರ ತೇಜಸ್ವಿಯವರನ್ನು ನೆನೆಯುವ ಕಾರ್ಯಕ್ರಮಗಳು. ಆದರೇ ಬಯಲು ರಂಗಮಂದಿರದಲ್ಲಿರುವ ಗ್ರಂಥಾಲಯ ದಲ್ಲಿ ಪೂಚಂತೇ ಎಂಬ ಸಾಹಿತಿಯ ಪುಸ್ತಕ ಇಡಲು ಮರೆತಿರುವುದು ದುರದೃಷ್ಟಕರ ಸಂಗತಿಯಾಗಿದೆ.