ಶಿಕ್ಷಕರ ಪ್ರತಿಭಾ ಪರಿಷತ್ ಉದ್ಘಾಟನೆ
ಬೀರೂರು: ಬೀರೂರು ಶೈಕ್ಷಣಿಕ ವಲಯದ ಹುಲ್ಲೇಹಳ್ಳಿ ಸಿಆರ್‌ಪಿ ಮಟ್ಟದ ಶಿಕ್ಷಕರ ಪ್ರತಿಭಾ ಪರಿಷತ್ತಿನ ಉದ್ಘಾಟನೆ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಎಂ.ಮಂಜುನಾಥ್ ಮಾತನಾಡಿ, ಕ್ರಿಯಾಶೀಲ ಚಟುವಟಿಕೆ ಹಾಗು ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿ ಈ ವೇದಿಕೆಯನ್ನು ಉಪಯುಕ್ತವಾಗಿ ಬಳಸಿಕೊಳ್ಳಬೇಕು ಎಂದರು.
ಪರಿಹಾರ ವೇದಿಕೆ: ಪ್ರಾಸ್ತಾವಿಕವಾಗಿ ಪ್ರತಿಭಾ ಪರಿಷತ್ತಿನ ಗೌರವಾಧ್ಯಕ್ಷ ವಿಶ್ವನಾಥ್ ಮಾತನಾಡಿ, ಮಕ್ಕಳ ಹಾಗು ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಈ ವೇದಿಕೆ ಬಳಕೆಯಾಗಲಿದೆ. ಉತ್ತಮ ರೀತಿಯಲ್ಲಿ ಸಂಘಟನೆ ಮೂಲಕ ಪರಿಷತ್ತು ಕ್ರೀಯಾಶೀಲವಾಗಿರಿಸುವುದಾಗಿ ಭರವಸೆ ನೀಡಿದರು.
ಬೀರೂರು ವಲಯದ ಅಧ್ಯಕ್ಷ ವೀರಮಾರುತಿ, ಈ ಭಾರಿ ಎಸ್‌ಎಸ್‌ಎಲ್ಸಿ ಮಕ್ಕಳಿಗೆ ಪರೀಕ್ಷೆ ಎದುರಿಸುವ ಕುರಿತಂತೆ ಕಾರ್ಯಾಗಾರ ನಡೆಸುವುದಾಗಿ ತಿಳಿಸಿದರು. ವೇದಿಕೆಯ ಚಂದ್ರಪ್ಪ ಮಾತನಾಡಿ, ತಾಲೂಕು ಪ್ರಧಾನ ಕಾರ್ಯದರ್ಶಿ ಲೋಕೇಶಪ್ಪ, ಹುಲ್ಲೇಹಳ್ಳಿ ಸಿಆರ್‌ಪಿ ಅಧ್ಯಕ್ಷ ಜೆ. ರುದ್ರಪ್ಪ ಮಾತನಾಡಿದರು. ಸಮಾರಂಭದಲ್ಲಿ ಪರಿಷತ್ತಿನ ಖಜಾಂಚಿ ಜ್ಞಾನೇಂದ್ರ, ಕಾರ್ಯದರ್ಶಿ ಸಿ.ಆರ್. ಪಿ.ಸುಬ್ಬಣ್ಣ, ಸಂಘಟನಾ ಕಾರ್ಯದರ್ಶಿ ಎಸ್.ಅಜ್ಜಪ್ಪ,ಎನ್. ಯೋಗೀಶ್,ಸಿ.ಹೆಚ್. ಯೋಗೀಶಪ್ಪ,ಚಂದ್ರಶೇಖರ್, ಜಿಲ್ಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಟಿ.ರಾಮಪ್ಪ,ವೈ.ಎಂ.ತಿಪ್ಪೇಶ್, ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ಮತ್ತಿತ್ತರರು ಪಾಲ್ಗೊಂಡಿದ್ದರು.