ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸರ್ಕಾರದ ಯೋಜನೆಗಳು ಸದುಪಯೋಗವಾಗಲಿ: ಸಂಸದ

Mainashree
Updated On : 9 Feb 2014, 10:36 am

ತರೀಕೆರೆ: ಕುಶಲಕರ್ಮಿಗಳು ಮತ್ತಿತರರು ಸರ್ಕಾರ ನೀಡುವ ವಿವಿಧ ಸೌಲಭ್ಯ ಮತ್ತು ಅನುದಾನದ  ಉಪಯೋಗ ಪಡೆದು ಹೆಚ್ಚಾಗಿ ಸ್ವ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಂಸದ ಜಯಪ್ರಕಾಶ್ ಹೆಗ್ಡೆ ತಿಳಿಸಿದರು.
ಅವರು, ಶನಿವಾರ ಇಲ್ಲಿಗೆ ಸಮೀಪದ ಮುಡುಗೋಡು ಗ್ರಾಮದಲ್ಲಿ ವಿನಾಯಕ ಸೇವಾ ಸಮಿತಿಯ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ನಂತರ ಏರ್ಪಡಿಸಲಾಗಿದ್ದ ವೃದ್ಧಾಪ್ಯ ವೇತನ ಆದೇಶ ಪ್ರತಿ ವಿತರಣೆ ಹಾಗೂ ವಿವಿಧ ಇಲಾಖೆಗಳಿಂದ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಹೆಚ್ಚು ಅನುದಾನ: ಆರ್ಥಿಕ ಸಬಲತೆಗೆ ಹೆಚ್ಚು ಅನುದಾನ ವಿತರಿಸಲಾಗಿದ್ದು, ರು. 75 ಲಕ್ಷದಲ್ಲಿ ಸೋಂಪುರ ದೇವಸ್ಥಾನ ಜೀರ್ಣೋದ್ಧಾರ, ತರೀಕೆರೆ ರೈಲು ನಿಲ್ದಾಣಕ್ಕೆ ಷಟರ್ ನಿರ್ಮಾಣ ಇತ್ಯಾದಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು.
ವಿವಿಧ ವೇತನ: ಶಾಸಕ ಜಿ.ಎಚ್. ಶ್ರೀನಿವಾಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿ ವೃದ್ಧಾಪ್ಯ ವೇತನ ಇತ್ಯಾದಿ ವಿವಿಧ ವೇತನಗಳನ್ನು ಸಮರೋಪಾದಿಯಲ್ಲಿ ನೀಡಲಾಗುತ್ತಿದೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿ ವಿತರಿಸಲಾಗಿದೆ, ಲಕ್ಕವಳ್ಳಿ ಹೋಬಳಿಯಲ್ಲಿ ರಸ್ತೆ ಅಭಿವೃದ್ಧಿಗೂ ಹೆಚ್ಚಿನ ಅನುದಾನ ನೀಡಲಾಗಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದಂತೆ ನೇರವಾಗಿ ಫಲಾನುಭವಿಗಳಿಗೆ ಸೌಲಭ್ಯ ತಲುಪುತ್ತಿದೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಘನಿ ಅನ್ವರ್, ಗ್ರಾಪಂ ಅಧ್ಯಕ್ಷ ಗೋವಿಂದಪ್ಪ, ತಾಪಂ ಅಧ್ಯಕ್ಷೆ ಶಕುಂತಲಾ ನಾಗರಾಜ್, ತಾಪಂ ಸದಸ್ಯ ಅನ್ಬು, ಸೀತಾರಾಂ, ಜಿಪಂ ಮಾಜಿ ಅಧ್ಯಕ್ಷ ಎಚ್. ವಿಶ್ವನಾಥ್, ವಿನಾಯಕ ಸೇವಾ ಸಮಿತಿ ಖಚಾಂಚಿ ಶಿವಾಜಿರಾವ್, ಎಚ್.ಎನ್. ಮಂಜುನಾಥ್ ಮೊದಲಾದವರು ಮಾತನಾಡಿದರು.
ತಾಪಂ ಸದಸ್ಯರಾದ ಲೀಲಾವತಿ, ರುದ್ರೇಗೌಡ್ರು, ಜಿಲ್ಲಾ ಕಾಂಗ್ರೆಸ್ ಸಮಿತಿ ಖಚಾಂಚಿ ಬಿ.ಎಸ್.ಆರ್. ಮಂಜುನಾಥ್ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಎಚ್.ಎನ್. ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement