ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವಿದ್ಯಾರ್ಥಿಗಳ ಕೈಯಲ್ಲಿ ದೇಶದ ಭವಿಷ್ಯ: ರಾಮಪ್ರಸಾದ್

Mainashree
Updated On : 10 Feb 2014, 12:24 pm

ಶೃಂಗೇರಿ: ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಕೇವಲ ಬಾಹ್ಯ ದೃಷ್ಟಿಯಿಂದ ನೋಡದೇ ಆಂತರಿಕವಾಗಿ ನೋಡಬೇಕು. ಯಾವ ವಿದ್ಯಾರ್ಥಿಗಳಲ್ಲಿ ಯಾವ ರೀತಿಯ ಭಾವನೆ ಅಡಗಿದೆ ಎಂಬುದನ್ನು ತಿಳಿಯಲು ಸಾಧ್ಯವಿಲ್ಲ. ದೇಶದ ನಿಜವಾದ ಭವಿಷ್ಯ ವಿದ್ಯಾಥಿಗಳ ಕೈಯಲ್ಲಿ ಅಡಗಿದೆ ಎಂದು ಹರಿಹರಪುರ ಸರ್ಕಾರಿ ಜೂನಿಯರ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ರಾಮಪ್ರಸಾದ್ ಅಭಿಪ್ರಾಯಪಟ್ಟರು.
   ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಸ್ತು, ಸಂಯಮ ಬೆಳೆಸಿ:  ಪೋಷಕರು, ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಒಳ್ಳೆಯ ವಿಚಾರಗಳನ್ನು ತುಂಬಬೇಕು. ವಿದ್ಯಾರ್ಥಿಗಳಲ್ಲಿ ತಪ್ಪು ಭಾವನೆ ಮೂಡಿಸಿದರೆ ಅವರು ದಾರಿ ತಪ್ಪುತ್ತಾರೆ. ಅವರಲ್ಲಿರುವ ಲೋಪದೋಷ ಸರಿಪಡಿಸಿ ಅವರಿಗೆ ಸರಿದಾರಿಗೆ ತರುವ ಹೊಣೆ ಇವರ ಮೇಲಿದೆ. ಚಿಕ್ಕಂದಿನಿಂದಲೇ ಅವರಲ್ಲಿ ಆತ್ಮವಿಶ್ವಾಸ ಮತ್ತು ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಶಿಸ್ತು, ಸಂಯಮ ಬೆಳೆಸಬೇಕು ಎಂದರು.
ಶಾರದಾ ಪೂಜೆ:  ಇದೇ ಸಂದರ್ಭ ಶಾಲೆಯಲ್ಲಿ ಶಾರದಾ ಪೂಜೆ ನೆರವೇರಿಸಲಾಯಿತು. ಕಾಲೇಜಿನಿಂದ ವರ್ಗಾವಣೆಗೊಂಡ ಪ್ರಾಚಾರ್ಯ ತಿಪ್ಪೇಶ್ ಹಾಗೂ ಪ್ರೌಢಶಾಲಾ ವಿಭಾಗದ ರಾಧಮ್ಮ ಅವರನ್ನು ಶಾಲಾಭಿವೃದ್ಧಿ ಸಮೀತಿ ಹಾಗೂ ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.
  ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸುವರ್ಣ ಅವಿನಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಸಂಪತ್‌ಕುಮಾರ್, ಆಶಾಪೂರ್ಣದೇವಿ, ಪುಷ್ಪ ಮಂಜೇಶ್, ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
 ಉಮೇಶ್ ಸ್ವಾಗತಿಸಿದರು. ವಿನೋದ್ ವಾರ್ಷಿಕ ವರದಿ ವಾಚಿಸಿದರು. ಸತೀಶ್ ನಿರೂಪಿಸಿ, ಶ್ರೀಮಂದಾರ ವಂದಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement