ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

29.30 ಲಕ್ಷ ಪರಿಹಾರ ವಿತರಣೆ

Rashmi Kasaragodu
Updated On : 11 Feb 2014, 1:46 am

ಬೆಂಗಳೂರು: ಕುದುರೆಮುಖ ಅರಣ್ಯ ಪ್ರದೇಶದಲ್ಲಿ ವಾಸವಾಗಿದ್ದ ಪದ್ಮಯ್ಯ ಮಲೆಕುಡಿಯ ಅವರ ಕುಟುಂಬದ ಪುನರ್ವಸತಿಗಾಗಿ ಉಡುಪಿ ಜಿಲ್ಲಾಡಳಿತವು 29.30 ಲಕ್ಷ ಪರಿಹಾರ ಧನ ನೀಡಿದೆ.
ಪದ್ಮಯ್ಯ ಮಲೆಕುಡಿಯ ಅವರ ಎರಡು ಎಕರೆ ಕೃಷಿ ಭೂಮಿಯು ಕುದುರೆಮುಖ ರಾಷ್ಟ್ರೀಯ ಅಭಯಾರಣ್ಯ ಪ್ರದೇಶಕ್ಕೆ ಸೇರುತ್ತಿತ್ತು. ಈ ಹಿನ್ನೆಲೆಯಲ್ಲಿ ಪದ್ಮಯ್ಯ ಅವರ ಸ್ವ-ಇಚ್ಚೆಯಂತೆ ಭೂಮಿಯ ದರವನ್ನು ಲೆಕ್ಕಾಚಾರ ಮಾಡಿ ಪರಿಹಾರ ಧನವನ್ನು ವಿತರಿಸಲಾಗಿದೆ. ಸ್ಥಳೀಯ ಶಾಸಕ ಸುನೀಲ್‌ಕುಮಾರ್ ಅವರು ಪದ್ಮಯ್ಯ ಅವರಿಗೆ ಇತ್ತೀಚೆಗೆ ಪರಿಹಾರದ ಚೆಕ್ ವಿತರಿಸಿದರು.
ವೈಲ್ಡ್‌ಲೈಫ್ ಕನ್ಸರ್ವೇಷನ್ ಸೊಸೈಟಿಯ ನೆರವಿನಿಂದ ಪದ್ಮಯ್ಯ ಅವರಿಗೆ ಬೇರೆಡೆ ಸ್ಥಳ ಗುರುತಿಸಲಾಗಿದೆ. ಸರ್ಕಾರ ನೀಡುತ್ತಿರುವ ಪರಿಹಾರ ಮೊತ್ತದಿಂದ ಮಲೆಕುಡಿಯ ಅವರ ಕುಟುಂಬಕ್ಕೆ ಶಿಕ್ಷಣ, ವೈದ್ಯಕೀಯ ಹಾಗೂ ಇತರ ಮೂಲಭೂತ ಸೌಕರ್ಯವನ್ನು ಒದಗಿಸಲಾಗುತ್ತಿದೆ.
“A¦ÈÛÒVÚ×Ú ಅರಣ್ಯ ಹಕ್ಕಿನ ಪ್ರಕಾರ ಸರ್ಕಾರ ಹೊಸ ವ್ಯವಸ್ಥೆ ಕಲ್ಪಿಸಿಕೊಡುತ್ತಿದೆ. ಇದರಿಂದ ನನಗೆ ಖುಷಿ ತಂದಿದ್ದು, ನನ್ನ ಕುಟುಂಬಕ್ಕೂ ಆರೋಗ್ಯ ಹಾಗೂ ಶಿಕ್ಷಣದ ಹಕ್ಕು ÒVÚß~¡¥æ’ ಎಂದು ಪದ್ಮಯ್ಯ ಮಲೆಕುಡಿಯ ಸಂತಸ ವ್ಯಕ್ತಪಡಿಸಿದ್ದಾರೆ.
ಪದ್ಮಯ್ಯ ಅವರ ಈ ನಿರ್ಣಯುವ ಅರಣ್ಯ ಹಕ್ಕಿಗೆ ದೊರೆತ ನ್ಯಾಯವಾಗಿದೆ. ಇದರಿಂದ ಬಡ ಆದಿವಾಸಿಗಳ ಕುಟುಂಬಕ್ಕೂ ಹಕ್ಕು ದೊರೆತಂತಾಗಿದೆ. ಮತ್ತೊಂದೆಡೆ ಕಾಡುಪ್ರಾಣಿಗಳು ನಿರ್ಭೀಡೆಯಿಂದ ಬದುಕಲು ಸಾಧ್ಯವಾಗಿದೆ ಎಂದು ವೈಲ್ಡ್‌ಲೈಫ್ ಕನ್ಸರ್ವೇಷನ್ ಸೊಸೈಟಿಯ ನಿರ್ದೇಸಕ ಡಾ.ಉಲ್ಲಾಸ ಕಾರಂತ್ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement