ಇಲ್ಲಿ ನಮಗೆ ಯಾರೂ ದಿಕ್ಕಿಲ್ಲ
ಒತ್ತುವರಿ ತೆರವು ವಿಚಾರ ತಿಳಿಯುತ್ತಿದ್ದಂತೆ ಬಲಿಗೆ ಹಾಗೂ ಸುತ್ತಮುತ್ತಲಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಸಾರ್ವಜನಿಕರು ಇಂದು ಬಲಿಗೆ ಗ್ರಾಮ ತೆರವುಗೊಂಡರೆ ನಾಳೆ ನಾವು ಕೂಡ ಬೀದಿಗೆ ಬೀಳಬೇಕಾಗುತ್ತದೆ. ನಮಗೆ ಯಾರೂ ದಿಕ್ಕೂ ಇಲ್ಲ. ಮುಂದಿನ ಜೀವನ ಹೇಗೆಂದು ಮಹಿಳೆಯರು ಗೋಳಾಡುತ್ತಿದ್ದರು. ತಲಾತಲಾಂದಿರದಿಂದ ವಾಸಿಸುತ್ತಿರುವ ಮನೆ ತೋಟಗಳನ್ನು ನಿರ್ನಮ ಮಾಡುವುದನ್ನು ನೋಡಲು ಸಾಧ್ಯವಿಲ್ಲ. ನಿರ್ನಾಮ ಆಗುವ ಮೊದಲೇ ತಮ್ಮ ಜೀವವನ್ನು ಬಿಡಲು ಸಜ್ಜಾದ ಕೆಲವು ಗಂಡಸರು ವಿಷದ ಬಾಟಲಿಗಳನ್ನು ಕೈ ಚೀಲ ಮತ್ತು ಜೇಬುಗಳಲ್ಲಿ ಇಟ್ಟುಕೊಂಡಿದ್ದರು. ವಿಷ ಸೇವಿಸಿ ಆತ್ಮ ಹತ್ಯೆಗೆ ಯತ್ನಿಸುವ ವಿಚಾರವನ್ನು ತಿಳಿದ ಪೋಲೀಸರು ಅವರಲ್ಲಿದ್ದ ವಿಷದ ಬಾಟಲಿಗಳನ್ನು ವಶಕ್ಕೆ ಪಡೆದುಕೊಂಡರು.