ಪಂಚಾಯತ್ ರಾಜ್ ಕಾಯಿದೆ: ಸಲಹಾ ಸಭೆ
ತರೀಕೆರೆ: ಸೋಮವಾರ ಶಾಸಕರ ಕಾರ್ಯಾಲಯದಲ್ಲಿ ಪಂಚಾಯತ್ ರಾಜ್ ಕಾಯಿದೆ ನ್ಯೂನತೆಗಳನ್ನು ಸರಿಪಡಿಸುವ ಕುರಿತು ಸಲಹೆ ಮತ್ತು ಮಾರ್ಗದರ್ಶನ ಪಡೆಯುವ ಜನರ ಧ್ವನಿ ಸಮಾಲೋಚನಾ ಸಭೆಯನ್ನು ಏರ್ಪಡಿಸಲಾಗಿತ್ತು.
ಶಾಸಕ ಜಿ.ಎಚ್. ಶ್ರೀನಿವಾಸ್ ಅವರು ಮಾತನಾಡಿ, ಪಂಚಾಯತ್ ರಾಜ್‌ನ್ನು ಹೇಗೆ ಅಭಿವೃದ್ಧಿ ಪಡಿಸಬಹುದು, ನ್ಯನೂತೆಗಳನ್ನು ಸರಿಪಡಿಸಬೇಕು, ಈ ಹಿನ್ನಲೆಯಲ್ಲಿ ಸಲಹೆ ಮತ್ತು ಮಾರ್ಗದರ್ಶನ ಅಗತ್ಯವಾಗಿದೆ ಎಂದು ತಿಳಿಸಿದರು.
ತಾ.ಪಂ. ಅಧ್ಯಕ್ಷೆ ಶಕುಂತಲ ನಾಗರಾಜ್, ಯುವ ಕಾಂಗ್ರೆಸ್ ಮುಖಂಡರಾದ ಸಂದೀಪ್, ರಾಬಿನ್ ಮೌಸಿಯೋ, ಓಂಕಾರಯ್ಯ, ಯದುಕುಮಾರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಖಚಾಂಚಿ ಬಿ.ಎಸ್.ಆರ್. ಮಂಜುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷರು, ತಾ.ಪಂ. ಸದಸ್ಯರು, ಪುರಸಭಾ ಸದಸ್ಯರಾದ ಪದ್ಮರಾಜ್, ಟಿ.ಜಿ. ಅಶೋಕ್‌ಕುಮಾರ್, ನಾಗರಾಜ್, ಪ್ರಕಾಶ್ ವರ್ಮ, ಟಿ.ಎಸ್. ಧರ್ಮರಾಜ್, ರಮೇಶ್, ನಾಗರಾಜ್ ಮತ್ತಿತರರು ಭಾಗವಹಿಸಿದ್ದರು.